Thursday, 22nd May 2025

Jaishankar in Pakistan: ಆರ್ಥಿಕ ಪ್ರಗತಿ, ವ್ಯಾಪಾರಕ್ಕೆ ಭಯೋತ್ಪಾದನೆಯೇ ಬಹುದೊಡ್ಡ ಕಂಟಕ; ಪಾಕ್‌ನಲ್ಲಿ ಗುಡುಗಿದ ಜೈ ಶಂಕರ್

jaishankar

ಇಸ್ಲಾಮಾಬಾದ್‌: ಗಡಿ ಪ್ರದೇಶದಲ್ಲಿ ತಲೆದೋರಿರುವ ಭಯೋತ್ಪಾದನೆ ಯಾವ ವ್ಯಾಪಾರಕ್ಕೂ ಉತ್ತೇಜನ ನೀಡಲಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(Jaishankar in Pakistan) ಪಾಕಿಸ್ತಾನಕ್ಕೆ ಟಾಂಗ್‌ ಕೊಟ್ಟಿದ್ದಾರೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಎಸ್‌ಸಿಒ ಕೌನ್ಸಿಲ್ ಆಫ್ ಹೆಡ್‌ಗಳ 23 ನೇ ಸಭೆಯಲ್ಲಿ ಎಸ್. ಜೈಶಂಕರ್(S.Jaishankar) ಅವರು ಅಭಿವೃದ್ಧಿ ಮತ್ತು ಬೆಳವಣಿಗೆಗೆ ನಿಜವಾದ ಪಾಲುದಾರಿಕೆ, ಶಾಂತಿ ಮತ್ತು ಸ್ಥಿರತೆಯ ಪ್ರಾಮುಖ್ಯತೆಯನ್ನು ಬುಧವಾರ ಒತ್ತಿ ಹೇಳಿದರು. ಭಯೋತ್ಪಾದನೆ, ಗಡಿಯಾಚೆಗಿನ ಚಟುವಟಿಕೆಗಳು ವ್ಯಾಪಾರ, ಶಕ್ತಿಯ ಹರಿವು ಮತ್ತು ಸಂಪರ್ಕಕ್ಕೆ ಅಡ್ಡಿಯಾಗುತ್ತವೆ ಎಂದು ಅವರು ಹೇಳಿದ್ದಾರೆ.

ಅಭಿವೃದ್ಧಿ ಮತ್ತು ಬೆಳವಣಿಗೆಗೆ ಶಾಂತಿ ಮತ್ತು ಸ್ಥಿರತೆಯ ಅಗತ್ಯವಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಯುಎನ್ ಭದ್ರತಾ ಮಂಡಳಿಯ ಸಮಗ್ರ ಸುಧಾರಣೆಯ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು.

ಕಾಶ್ಮೀರ ಸಮಸ್ಯೆ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದಂತೆ ಎರಡು ನೆರೆಹೊರೆಯವರ ನಡುವಿನ ಸಂಬಂಧಗಳು ಉದ್ವಿಗ್ನವಾಗಿರುವಾಗಲೇ ಸುಮಾರು ಒಂಬತ್ತು ವರ್ಷಗಳಲ್ಲಿ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದು ಇದೇ ಮೊದಲು. ಎಸ್‌ ಜೈಶಂಕರ್ ಬುಧವಾರ ನಡೆದ ಎಸ್‌ಸಿಒ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (ಸಿಎಚ್‌ಜಿ) ಶೃಂಗಸಭೆಯಲ್ಲಿ ಭಾರತೀಯ ನಿಯೋಗವನ್ನು ಮುನ್ನಡೆಸುತ್ತಿದ್ದಾರೆ.

ಪಾಕಿಸ್ತಾನದಲ್ಲಿ SCO ಶೃಂಗಸಭೆ

SCO ಶೃಂಗಸಭೆಯು ಈ ಪ್ರದೇಶಕ್ಕೆ ಮಹತ್ವದ ಸಭೆಯಾಗಿದ್ದು, ಇದು ಭಾರತ, ಚೀನಾ, ರಷ್ಯಾ ಮತ್ತು ಹಲವಾರು ಮಧ್ಯ ಏಷ್ಯಾ ರಾಷ್ಟ್ರಗಳ ನಾಯಕರನ್ನು ಒಟ್ಟುಗೂಡಿಸುತ್ತದೆ. SCO CHG ಯ ಎರಡು ದಿನಗಳ ಸಭೆಯು ಕೌನ್ಸಿಲ್‌ನ ಪ್ರಸ್ತುತ ಅಧ್ಯಕ್ಷರಾಗಿ ಪಾಕಿಸ್ತಾನದ ಪ್ರಧಾನಿ ಷರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ: S Jaishankar : ಪಾಕಿಸ್ತಾನ ಪ್ರಧಾನಿ ಆಯೋಜಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡ ಸಚಿವ ಎಸ್‌ ಜೈಶಂಕರ್