Wednesday, 14th May 2025

ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಪತ್ನಿ ಇನ್ನಿಲ್ಲ

ದೆಹಲಿ: ಹಿರಿಯ ಗಾಯಕ, ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಅವರ ಪತ್ನಿ ಜಗಜಿತ್ ಕೌರ್ (93) ನಿಧನರಾದರು.

ದಿವಂಗತ ಸಂಗೀತ ಸಂಯೋಜಕ ಮೊಹಮ್ಮದ್ ಜಹೂರ್ ಖಯ್ಯಾಮ್ ಅವರ ಪತ್ನಿ ಜಗಜಿತ್ ಕೌರ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆ ದರು. ಇವರ ಅಂತ್ಯಸಂಸ್ಕಾರವನ್ನು ಮುಂಬೈನ ಎಸ್‌ವಿ ರೋಡ್ ವಿಲೆ ಪಾರ್ಲೆಯ ಪವನ್ ಹನ್ಸ್ ಸ್ಮಶಾನದಲ್ಲಿ ನೆರವೇರಿಸಲಾಯಿತು.

ಜಗಜಿತ್ ಕೌರ್ ತನ್ನ ಸಂಗೀತ ವೃತ್ತಿ ಜೀವನವನ್ನು 50 ರ ದಶಕದಲ್ಲಿ ಆರಂಭಿಸಿದರು. ಪೋಸ್ತಿ ಮತ್ತು ದಿಲ್-ಎ-ನಾದನ್ ನಂತಹ ಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. 1954 ರಲ್ಲಿ ಖಯ್ಯಾಮ್ ಅವರನ್ನು ವಿವಾಹ ವಾದರು.

1981 ರಲ್ಲಿ ಉಮರಾವ್ ಜಾನ್ ಅವರ ಖಯ್ಯಾಮ್ ಸಂಯೋಜನೆಯ ಸ್ಮರಣೀಯ ಧ್ವನಿಪಥ ದಲ್ಲಿ ಹಾಡು ಹಾಡಿದರು. ಕೌರ್ ಪತಿ ಖಯ್ಯಾಮ್ 2019ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನ ಹೊಂದಿ ದ್ದರು.

ತಮ್ಮ 17 ನೇ ವಯಸ್ಸಿನಲ್ಲಿ ಸಂಗೀತ ವೃತ್ತಿ ಆರಂಭಿಸಿದ ಖಯ್ಯಾಮ್, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಭೂಷಣಕ್ಕೂ ಭಾಜನರಾಗಿದ್ದರು. ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ನಟಿ ಮೀನಾ ಕುಮಾರಿ ಅವರ ಆಲ್ಬಂಗೂ ಸಂಗೀತ ಸಂಯೋಜಿಸಿ ದ್ದರು.

Leave a Reply

Your email address will not be published. Required fields are marked *