ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ESA) ಪ್ರೋಬಾ-3 ಉಪಗ್ರಹಗಳನ್ನು(ISRO Proba-3 launch) ನಾಳೆ(ಡಿ.4) ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ (European Space Agency) ಅಭಿವೃದ್ಧಿಪಡಿಸಿರುವ ಪ್ರೋಬಾ-3 ಅನ್ನು (ಪ್ರಾಜೆಕ್ಟ್ ಆನ್ಬೋರ್ಡ್ ಅಟೋನಮಿ) ಡಿ. 4ರ ಸಂಜೆ 4:08 ಕ್ಕೆ ಸರಿಯಾಗಿ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಪಿಎಸ್ಎಲ್ವಿ-ಸಿ 59 ರಾಕೆಟ್ ಮೂಲಕ ಉಡಾವಣೆಗೊಳಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಜ್ಜಾಗಿದೆ.
⏳ 2 Days Left!
— ISRO (@isro) December 2, 2024
The PSLV-C59/PROBA-3 Mission, the 61st flight of PSLV and the 26th using PSLV-XL configuration, is set to carry ESA’s PROBA-3 satellites (~550kg) into a highly elliptical orbit.
💡 PSLV-C59 Configuration:
Stages: 6PSOM-XL + S139 + PL40 + HPS3 + L2.5
Liftoff… pic.twitter.com/7B9sSkGeb4
ಸೂರ್ಯನ ಅತ್ಯಂತ ಹೊರಗಿನ ಮತ್ತು ಅತ್ಯಂತ ಬಿಸಿಯ ಪದರವಾದ ಸೌರ ಕರೋನಾದ(Sun Corona) ಅಧ್ಯಯನ ನಡೆಸುವ ಉದ್ದೇಶದಿಂದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಪ್ರೋಬಾ-1, ಪ್ರೋಬಾ-2 2001 ಮತ್ತು 2009ರಲ್ಲಿ ಕ್ರಮವಾಗಿ ಉಡಾವಣೆಯಾಗಿತ್ತು. ಪ್ರೋಬಾ-3ರ ಅಭಿವೃದ್ಧಿಗಾಗಿ ಸ್ಪೇನ್, ಬೆಲ್ಜಿಯಂ, ಪೋಲೆಂಡ್, ಇಟಲಿ ಮತ್ತು ಸ್ವಿಜರ್ಲೆಂಡ್ಗಳ ವಿಜ್ಞಾನಿಗಳು ತಯಾರಿ ನಡೆಸಿದ್ದರು. ಈಗ ಆ ಕಾರ್ಯ ಪೂರ್ಣಗೊಂಡಿದೆ.
ಪ್ರೋಬಾ-3
ಅಂದಾಜು 200 ಮಿಲಿಯನ್ ಯುರೋ ( 9.2 ಕೋಟಿ ರು.) ವೆಚ್ಚದಲ್ಲಿ ಪ್ರೋಬಾ-3 ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಸರಿ ಸುಮಾರು 550 ಕೆಜಿ ತೂಕವಿದೆ ಎನ್ನಲಾಗಿದೆ. ಇದು 2 ವರ್ಷಗಳ ಕಾಲ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ. ಎರಡು ವರ್ಷದ ಅವಧಿಯಲ್ಲಿ ವಿಜ್ಞಾನಿಗಳು ಸರಿಸುಮಾರು 6 ಗಂಟೆಗಳ 50 ಕೃತಕ ಸೂರ್ಯ ಗ್ರಹಣಗಳನ್ನು ಉಂಟುಮಾಡಲಿದ್ದಾರೆ.
ಪ್ರೋಬಾ-3 ಬಾಹ್ಯಾಕಾಶ ನೌಕೆಯನ್ನು ಭೂಮಿಯ ಸುತ್ತಲೂ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಭೂಮಿಗೆ ಅತ್ಯಂತ ಸಮೀಪದ ಬಿಂದುವಿನಲ್ಲಿ (ಪೆರಿಜೀ) ಇದು ಭೂಮಿಯಿಂದ 600 ಕಿ.ಮೀ ದೂರದಲ್ಲಿದ್ದರೆ, ಭೂಮಿಗೆ ಅತ್ಯಂತ ದೂರದ ಬಿಂದುವಿನಲ್ಲಿ (ಅಪೊಜೀ) 60,530 ಕಿ.ಮೀ.ಗಳಷ್ಟು ದೂರದಲ್ಲಿರಲಿದೆ. ಪ್ರೋಬಾ-3 ಯೋಜನೆಯ ಅಭಿವೃದ್ಧಿ ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ನಡೆಯುತ್ತಿದೆ. ಇದರಲ್ಲಿ ಯುರೋಪಿನಾದ್ಯಂತ ಇರುವ 40ಕ್ಕೂ ಹೆಚ್ಚು ಕಂಪನಿಗಳ ಪಾತ್ರವಿದೆ ಎಂದು ತಿಳಿದು ಬಂದಿದ್ದು, ಇಎಸ್ಎಯ 13 ಸದಸ್ಯ ರಾಷ್ಟ್ರಗಳು ಪ್ರೋಬಾ-3ಗೆ ಸಾಕಷ್ಟು ಬೆಂಬಲ ನೆರವು ನೀಡಿವೆ.
ಪ್ರೋಬಾ-3 ಭಾರತದಿಂದಲೇ ಉಡಾವಣೆ ಯಾಕೆ?
ಪ್ರೋಬಾ-3 ಇಎಸ್ಎಯ ತಂತ್ರಜ್ಞಾನ ಪ್ರದರ್ಶಕ ಯೋಜನೆಯಾಗಿದೆ. ಇದರ ಉಡಾವಣೆಗಾಗಿ ಇಸ್ರೋವನ್ನು ಆಯ್ಕೆ ಮಾಡಿಕೊಂಡಿರುವುದು ಭಾರತದ ಬಾಹ್ಯಾಕಾಶ ಉಡಾವಣಾ ಸೇವೆ ಮೇಲೆ ಜಗತ್ತಿನ ಇತರೆ ರಾಷ್ಟ್ರಗಳು ಇರಿಸಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಪುರಾವೆಯಾಗಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಖ್ಯಾತಿ ಮತ್ತು ಪ್ರಾವೀಣ್ಯತೆ ದಿನೇದಿನೇ ಹೆಚ್ಚುತ್ತಿದೆ ಎನ್ನುವುದಕ್ಕೆ ಪ್ರೋಬಾ-3 ಉಡಾವಣೆ ಕೂಡ ಸಾಕ್ಷಿಯಾಗಲಿದೆ.
ನಾಸಾದಿಂದ ಇಬ್ಬರು ಇಸ್ರೋ ಗಗನಯಾತ್ರಿಗಳಿಗೆ ತರಬೇತಿ ಪೂರ್ಣ
ಅಮೆರಿಕದ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಸಹಭಾಗಿತ್ವದಲ್ಲಿ ನಡೆಯಲಿರುವ ಮೊದಲ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾಗಿರುವ ಇಬ್ಬರು ಭಾರತೀಯ ಗಗನಯಾತ್ರಿಗಳು ಮೊದಲ ಹಂತದ ತರಬೇತಿಯನ್ನು ಅಮೆರಿಕದಲ್ಲಿ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಯಾನಕ್ಕೆ ಆಯ್ಕೆಯಾಗಿರುವ ಗ್ರೂಪ್ ಕ್ಯಾಪ್ಟನ್ ಶುಭಾನ್ಷು ಶುಕ್ಲಾ ಮತ್ತು ಪ್ರಶಾಂತ್ ಬಾಲಕೃಷ್ಣನ್ ಅವರು ಕಳೆದ ಆಗಸ್ಟ್ನಲ್ಲಿ ಅಮೆರಿಕಕ್ಕೆ ತೆರಳಿ ಅಲ್ಲಿ ಮೊದಲ ಹಂತದ ಹಲವು ತರಬೇತಿಯನ್ನು ಪಡೆದುಕೊಂಡಿದ್ದಾರೆ ಎಂದು ಇಸ್ರೋ ಮಾಹಿತಿ ನೀಡಿದೆ. ನಾಸಾ-ಇಸ್ರೋ ಸಹಭಾಗಿತ್ವದ ಈ ಉಡ್ಡಯನ 2025ರ ಏಪ್ರಿಲ್ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ:ತಿರುಪತಿ ದೇವರ ದರ್ಶನ ಪಡೆದ ಇಸ್ರೋ ವಿಜ್ಞಾನಿಗಳ ತಂಡ