
ಒಟ್ಟಾಗಿ 20 ಭಾಷೆಗಳನ್ನು ಮಾತನಾಡುವ ಚಾಕಚಕ್ಯತೆ ಈ ಸಿಬ್ಬಂದಿಗಳಲ್ಲಿದೆ ಎಂಬುದು ಮತ್ತೊಂದು ವಿಶೇಷ. ಮುಂಬೈನಲ್ಲಿ ಆಪಲ್ ಸ್ಟೋರ್ ಪ್ರಾರಂಭ ಆಗಿರುವುದರಿಂದ ದೇಶದಲ್ಲಿ ಕಂಪನಿಯ ಕಾರ್ಯಾಚರಣೆ ಗಳ ಗಮನಾರ್ಹ ವಿಸ್ತರಣೆಯನ್ನು ಸೂಚಿಸುತ್ತದೆ.
ಇನ್ನು ಐಫೋನ್ 15 ಸೀರಿಸ್ ಮಾರಾಟ ಆರಂಭವಾಗುವ ಮೊದಲೇ ಇದರ ಬೆಲೆಯಲ್ಲಿ ಭಾರೀ ರಿಯಾಯಿತಿ ಘೋಷಿಸಲಾಗಿದ್ದು, ಈ ಮೂಲಕ ಬಳಕೆದಾರರು 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಐಫೋನ್ 15 ಫೋನ್ ಖರೀದಿಸಬಹುದು. ಪ್ರಿಬುಕಿಂಗ್‌ಗಳಿಗೆ ಉತ್ತಮ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು, ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಐಫೋನ್ 15 ಖರೀದಿಸಲು ಅನೇಕರು ಆಸಕ್ತಿ ತೋರಿಸುತ್ತಾರೆ.
ಭಾರತದಲ್ಲಿ iPhone 15 ಮೂಲ ಆವೃತ್ತಿಯ ಬೆಲೆ ರೂ.79,900 ರಿಂದ ಪ್ರಾರಂಭವಾಗುತ್ತದೆ. ಆದರೆ ರೂ.50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಅವಕಾಶವಿದೆ.