Tuesday, 13th May 2025

ಆರ್‌ಎಸ್‌ ಪುರ ಸೆಕ್ಟರ್‌: ಒಳನುಸುಳುಕೋರನ ಬಂಧನ

ಮ್ಮು: ಆರ್‌ಎಸ್‌ ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಒಬ್ಬ ಪಾಕಿಸ್ತಾನಿ ಒಳನುಸುಳುಕೋರನನ್ನು ಸದೆಬಡಿಯಲಾಗಿದೆ.

ಒಳನುಗ್ಗಿದ ವ್ಯಕ್ತಿಗೆ ಎಚ್ಚರ ಕೊಟ್ಟರೂ ಕ್ಯಾರೆ ಎನ್ನದೆ ಒಳಬರಲು ಪ್ರಯತ್ನಿಸು ತ್ತಿದ್ದ ಎನ್ನಲಾಗಿದೆ. ಸೂಚನೆಗೂ ಬಗ್ಗದೆ ಒಳ ನುಸುಳುತ್ತಿದ್ದವ ನನ್ನು ಸೇನೆ ಗುಂಡಿಕ್ಕಿದೆ. ಈ ಘಟನೆಗೆ ಪಾಕಿಸ್ತಾನದ ಕಡೆಯಿಂದ ಯಾವುದೇ ಪ್ರತೀಕಾರ ನಡೆದಿಲ್ಲ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ. ಈ ಪ್ರದೇಶವನ್ನು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಯು ತ್ತಿದೆ.

ಇದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ರಾಮ್‌ಗಢ ಸೆಕ್ಟರ್‌ನಲ್ಲಿ ಅಂತರರಾಷ್ಟ್ರೀಯ ಗಡಿ ದಾಟಿ ಫೆನ್ಸಿಂಗ್‌ ಸಮೀಪಿಸುತ್ತಿರು ವಾಗ ಪಾಕಿಸ್ತಾನಿ ಒಳನುಗ್ಗುತ್ತಿದ್ದವರನ್ನು ಸಹ ಬಿಎಸ್‌ಎಫ್ ಪಡೆಗಳು ಬಂಧಿಸಿವೆ.

ಗೇಟ್ ತೆರೆದ ನಂತರ ಆತನನ್ನು ಭಾರತದ ಬೇಲಿಯ ಬದಿಯೊಳಗೆ ಕರೆತರಲಾಯಿತು. ಆತನಿಂದ ಯಾವುದೇ ದೋಷಾರೋಪಣೆ ಕಂಡುಬಂದಿಲ್ಲ. ಪ್ರದೇಶವನ್ನು ಶೋಧಿಸಲಾಗುವುದು ಎಂದು ಬಿಎಸ್‌ಎಫ್ ಹೇಳಿದೆ.