Saturday, 10th May 2025

Indian-Origin Techie: ಭಾರತೀಯ ಮೂಲದ ಈ ಟೆಕ್ಕಿಯ ದಿನದ ಗಳಿಕೆ ಬರೋಬ್ಬರಿ 48 ಕೋಟಿ ರೂ.

ನವ ದೆಹಲಿ: ಭಾರತೀಯ ಮೂಲದ ಟೆಕ್ಕಿಯೊಬ್ಬರು ವಾರ್ಷಿಕ 17,500 ಕೋಟಿ ರೂಪಾಯಿ ಆದಾಯ ಗಳಿಸುವುದರೊಂದಿಗೆ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿ ಅನ್ನಿಸಿಕೊಂಡಿದ್ದಾರೆ. ಪ್ರಮುಖ ಎಲೆಕ್ಟ್ರಿಕ್ ವೆಹಿಕಲ್ (EV) ಬ್ಯಾಟರಿ ಕಂಪನಿಯಾದ ಕ್ವಾಂಟಮ್‌ಸ್ಕೇಪ್‌ (QuantumScape)ನ ಸಂಸ್ಥಾಪಕ ಜಗದೀಪ್ ಸಿಂಗ್ (Jagdeep Singh) ಪ್ರತಿದಿನ ಬರೋಬ್ಬರಿ 48 ಕೋಟಿ ರೂಪಾಯಿ ಗಳಿಸುತ್ತಾರೆ. ಇದು ಅನೇಕ ಪ್ರಮುಖ ಕಂಪನಿಗಳ ವಾರ್ಷಿಕ ಆದಾಯಕ್ಕಿಂತಲೂ ಹೆಚ್ಚಿನದ್ದಾಗಿದೆ ಎಂದು ವರದಿಯೊಂದು ಹೇಳಿದೆ (Indian-Origin Techie).

ಜಗದೀಪ್‌ ಸಿಂಗ್ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಬಿಟೆಕ್ ಪದವಿ ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಅವರು HP (ಹೆವ್ಲೆಟ್-ಪ್ಯಾಕರ್ಡ್) ಮತ್ತು ಸನ್ ಮೈಕ್ರೋಸಿಸ್ಟಮ್ಸ್‌ನಂತಹ ಪ್ರಸಿದ್ಧ ಸಂಸ್ಥೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅನೇಕ ಸ್ಟಾರ್ಟ್‌ಅಪ್‌ಗಳಲ್ಲಿ ತೊಡಗಿಸಿಕೊಂಡರು. ಏರ್ ಸಾಫ್ಟ್‌ ಉದ್ಯಮವು ಅವರ ವೃತ್ತಿ ಬದುಕಿನ ಉದ್ಯೋಗಳಲ್ಲಿ ಒಂದಾಗಿದೆ. ವಿವಿಧ ಕಂಪನಿಗಳಲ್ಲಿ ಒಂದು ದಶಕಗಳಿಗೂ ಹೆಚ್ಚು ಕಾಲ ಅನುಭವ ಪಡೆದ ನಂತರ, ಜಗದೀಪ್ ಸಿಂಗ್ 2010ರಲ್ಲಿ ಕ್ವಾಂಟಮ್‌ಸ್ಕೇಪ್ ಅನ್ನು ಸ್ಥಾಪಿಸಿದರು. ಇದು ವಿಶೇಷವಾಗಿ ಬ್ಯಾಟರಿ ತಂತ್ರಜ್ಞಾನದಲ್ಲಿ ಹೆಚ್ಚು ಆವಿಷ್ಕಾರಗಳನ್ನು ಮಾಡಿದೆ.

QuantumScape ವಿದ್ಯುತ್ ವಾಹನಗಳಿಗಾಗಿ ಉತ್ತಮ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇವುಗಳು ಸಾಂಪ್ರದಾಯಿಕ ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತ ಭಿನ್ನವಾಗಿರುತ್ತವೆ. ಬ್ಯಾಟರಿಗಳು ವೇಗವಾಗಿ ಚಾರ್ಜ್‌ ಆಗಲಿದ್ದು, ಹೆಚ್ಚು ಶಕ್ತಿಸಾಂದ್ರವಾಗಿರುತ್ತದೆ. ಈ ಸುಧಾರಣೆಗಳು ಎಲೆಕ್ಟ್ರಿಕ್ ವಾಹನಗಳಿಗೆ (EV) ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ವ್ಯಾಪ್ತಿಯ ಆತಂಕ ಮತ್ತು ದೀರ್ಘ ಚಾರ್ಜಿಂಗ್ ಬ್ಯಾಟರಿಗಳು EVಗಳ ಭವಿಷ್ಯಕ್ಕಾಗಿ ಉತ್ತಮ ಆಯ್ಕೆಯಾಗಿದೆ. ಬಿಲ್ ಗೇಟ್ಸ್ ಮತ್ತು ವೋಕ್ಸ್‌ವ್ಯಾಗನ್‌ನಂತಹ ಹೂಡಿಕೆದಾರರ ಬೆಂಬಲದೊಂದಿಗೆ, ಕ್ವಾಂಟಮ್‌ಸ್ಕೇಪ್ ಭವಿಷ್ಯವನ್ನು ರೂಪಿಸುತ್ತಿದೆ. ಜಗದೀಪ್ ಸಿಂಗ್ ಅವರ ನಾಯಕತ್ವದಲ್ಲಿ, ಕ್ವಾಂಟಮ್‌ಸ್ಕೇಪ್ ಇವಿ ಬ್ಯಾಟರಿ ತಂತ್ರಜ್ಞಾನದಲ್ಲಿ‌ ಸಾಕಷ್ಟು ಮುನ್ನಡೆ ಸಾಧಿಸುತ್ತಿದೆ.

2024ರ ಫೆಬ್ರವರಿ 16ರಂದು ಜಗದೀಪ್‌ ಸಿಂಗ್ ಕ್ವಾಂಟಮ್‌ಸ್ಕೇಪ್‌ನ ಸಿಇಒ ಸ್ಥಾನದಿಂದ ಕೆಳಗಿಳಿದರು. ಶಿವರಾಮ್‌ಗೆ ಅಧಿಕಾರವನ್ನು ಹಸ್ತಾಂತರಿಸಿದರು. ಶಿವರಾಮ್ ಅವರು 2023ರ ಸೆಪ್ಟೆಂಬರ್‌ನಲ್ಲಿ ಕಂಪನಿಯ ಅಧ್ಯಕ್ಷರಾಗಿ ಸೇರಿಕೊಂಡರು. ಜಗದೀಪ್ ಸಿಂಗ್ ಈಗಲೂ ಮಂಡಳಿಯ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಹಾಗೆ ಅವರು ʼಸ್ಟೆಲ್ತ್ ಸ್ಟಾರ್ಟ್‌ಅಪ್ʼನ ಎಸ್‌ಇಒ ಕೂಡ ಆಗಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video:‌ ಇದು ಸರ್ಪ ಸಂಬಂಧ! ಸತ್ತ ಗಂಡು ಹಾವಿನ ಎದುರು ಗಂಟೆಗಟ್ಟಲೆ ಕೂತು ಶೋಕಿಸಿದ ಹೆಣ್ಣು ಹಾವು; ವಿಡಿಯೊ ವೈರಲ್

Leave a Reply

Your email address will not be published. Required fields are marked *