Sunday, 11th May 2025

ಆಗಸ್ಟ್​​ 25 ಹಾಗೂ 26ರಂದು ‘ಇಂಡಿಯಾ’ದ ಮೂರನೆ ಸಭೆ

ಮುಂಬೈ: ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಮಾಡಿಕೊಂಡಿರುವ ಮೈತ್ರಿ ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್)ದ ಮೂರನೇ ಸಭೆ ಆಗಸ್ಟ್ 25 ಮತ್ತು 26 ರಂದು ಮುಂಬೈನಲ್ಲಿ ಸೇರಲಿವೆ.

ಸಭೆಯನ್ನು ಉದ್ಧವ್ ಠಾಕ್ರೆ ಗುಂಪು, ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷ ಆಯೋಜಿಸಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾ ಡಲು ಈ ಮೈತ್ರಿಕೂಟವನ್ನು ರಚಿಸ ಲಾಗಿದೆ. ಈ ಮೈತ್ರಿಪಕ್ಷಗಳ ಸಭೆಗಳಲ್ಲಿ ದೇಶದ 26 ಬಿಜೆಪಿ ವಿರೋಧಿ ಪಕ್ಷಗಳು ಭಾಗವಹಿಸಿದ್ದವು. ಮೊದಲ ಸಭೆ ಜೂನ್ 23 ರಂದು ಬಿಹಾ ರದ ಪಾಟ್ನಾದಲ್ಲಿ ನಡೆದಿತ್ತು. ನಂತರ ಜು.17 ಮತ್ತು 18 ರಂದು ಬೆಂಗಳೂರಿನಲ್ಲಿ 2ನೇ ಸಭೆ ನಡೆದಿದೆ. ಮುಂಬೈನಲ್ಲಿ ಮೂರನೇ ಸಭೆ ನಡೆಯಲಿದೆ.

ಸಂಸತ್ತಿನ ಅಧಿವೇಶನ ಮುಗಿದ ನಂತರ ಒಂದು ದಿನ ಅಥವಾ ಎರಡು ದಿನದಲ್ಲಿ ದಿನಾಂಕಗಳನ್ನು ಅಂತಿಮಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಎಪಿ, ಜೆಡಿ(ಯು), ಆರ್​ಜೆಡಿ, ಶಿವಸೇನೆ (ಯುಬಿಟಿ), ಎನ್​ಸಿಪಿ, ಜೆಎಂಎಂ, ಸಮಾಜವಾದಿ ಪಕ್ಷ ಹಾಗೂ ಸಿಪಿಐ(ಎಂ) 11 ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *