Sunday, 11th May 2025

Surface-to-air Missile : ಶಾರ್ಟ್‌ ರೇಂಜ್‌ ಕ್ಷಿಪಣಿಯ ಪರೀಕ್ಷಾರ್ಥ ಹಾರಾಟ ಯಶಸ್ವಿ

Surface-to-air Missile

ನವದೆಹಲಿ: ಭಾರತೀಯ ನೌಕಾಪಡೆ ಮತ್ತು ಡಿಆರ್‌ಡಿಒ ಗುರುವಾರ ಒಡಿಶಾ ಕರಾವಳಿಯಲ್ಲಿ ಲಂಬವಾಗಿ ಉಡಾವಣೆಯಾಗುವ ಶಾರ್ಟ್‌ ರೇಂಜ್‌ನ ಕ್ಷಿಪಣಿಯ ಹಾರಾಟ (Surface-to-air Missile) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಕಡಿಮೆ ಎತ್ತರದಲ್ಲಿ ಹಾರುವ ಹೈಸ್ಪೀಡ್ ವೈಮಾನಿಕ ಗುರಿಯನ್ನು ಗುರಿಯಾಗಿಸಿಕೊಂಡು ಭೂ ಆಧಾರಿತ ಲಾಂಚರ್‌ನಿಂದ ಹಾರಾಟ ಪರೀಕ್ಷೆಯನ್ನು ನಡೆಸಲಾಯಿತು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಭಾರತೀಯ ನೌಕಾಪಡೆಯು ಒಡಿಶಾ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಸರ್ಫೇಸ್-ಟು-ಏರ್ ಕ್ಷಿಪಣಿ (ವಿಎಲ್-ಎಸ್ಆರ್ಎಸ್ಎಎಂ) ನ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಸಾಮೀಪ್ಯ ಫ್ಯೂಸ್ ಮತ್ತು ಸೀಕರ್ ಸೇರಿದಂತೆ ಶಸ್ತ್ರಾಸ್ತ್ರ ವ್ಯವಸ್ಥೆಯ ಅನೇಕ ಅಪ್‌ಡೇಟ್ ಮಾಡುವ ಅಂಶಗಳನ್ನು ಗುರಿಯನ್ನು ಈ ಪರೀಕ್ಷೆ ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ. ಐಟಿಆರ್ ಚಂಡಿಪುರದಲ್ಲಿ ನಿಯೋಜಿಸಲಾದ ರಾಡಾರ್ ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಮತ್ತು ಟೆಲಿಮೆಟ್ರಿಯಂತಹ ವಿವಿಧ ಉಪಕರಣಗಳಿಂದ ಟ್ರ್ಯಾಕ್ ಮಾಡಲಾಗಿದೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Narendra Modi : ಪ್ಯಾರಾ ಅಥ್ಲೀಟ್‌ಗಳ ಜತೆ ಸಂಭಾಷಣೆ ನಡೆಸಲು ನೆಲದ ಮೇಲೆ ಕುಳಿತ ಪ್ರಧಾನಿ ಮೋದಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ ಮತ್ತು ಭಾರತೀಯ ನೌಕಾಪಡೆಯ ತಂಡಗಳನ್ನು ಇದೇ ವೇಳೆ ಶ್ಲಾಘಿಸಿದರು. ಈ ಪರೀಕ್ಷೆಯು ವಿಎಲ್-ಎಸ್ಆರ್‌ಎಸ್ಎಎಂ ಶಸ್ತ್ರಾಸ್ತ್ರ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವವನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದರು.

ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ ಕಾಮತ್ ಅವರು ಭಾಗಿಯಾಗಿರುವ ತಂಡಗಳನ್ನು ಅಭಿನಂದಿಸಿದರು. ಈ ವ್ಯವಸ್ಥೆಯು ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಬಲ ದ್ವಿಗುಣಗೊಳಿಸುತ್ತದೆ ಎಂದು ಒತ್ತಿ ಹೇಳಿದರು.

Leave a Reply

Your email address will not be published. Required fields are marked *