Sunday, 11th May 2025

India Canada row : ಭಾರತ- ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು; ರಾಯಭಾರಿಗಳನ್ನು ಹೊರಗಟ್ಟಿದ ಭಾರತ

India Canada row:

ಬೆಂಗಳೂರು: ಕಳೆದ ವರ್ಷ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ರಾಯಭಾರಿಗಳನ್ನು ‘ಹಿತಾಸಕ್ತಿಯ ವ್ಯಕ್ತಿಗಳು’ ಎಂದು ಕೆನಡಾ ಅಪಮಾನಿಸಿರುವ ಕಾರಣ ಆ ದೇಶದೊಂದಿಗಿನ ಭಾರತದ ಸಂಬಂಧ (India Canada row) ಹದಗೆಡುತ್ತಿದೆ. ಅಲ್ಲಿನ ರಾಜತಾಂತ್ರಿಕ ಅಧಿಕಾರಿಗಳಿಗೆ ಸಮನ್ಸ್ ನೀಡಿದ್ದ ವಿದೇಶಾಂಗ ಇಲಾಖೆ ಇದೀಗ ನವದೆಹಲಿಯಲ್ಲಿರುವ ಕೆನಡಾದ ರಾಜತಾಂತ್ರಿಕ ಕಚೇರಿಯಿಂದ ಶನಿವಾರದೊಳಗೆ ದೇಶ ತೊರೆಯುವಂತೆ ಹೇಳಿದೆ. ಅದಕ್ಕಿಂತ ಮೊದಲು ಭಾರತ ಕೆನಡಾದಿಂದ ತನ್ನ ಹೈಕಮಿಷನರ್ ಮತ್ತು ಇತರ “ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು” ವಾಪಸ್ ಕರೆಸಿದ್ದರು. ಆ ನಿರ್ಧಾರದ ಬಳಿಕ ಅಲ್ಲಿನ ಅಧಿಕಾರಿಗಳಿಗೆ ವಾಪಸ್ ತೆರಳುವಂತೆ ಹೇಳಿದೆ.

ಭಾರತ ಸರ್ಕಾರವು ಈ ಕೆಳಗಿನ 6 ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಲು ನಿರ್ಧರಿಸಿದೆ. ಸ್ಟೀವರ್ಟ್ ರಾಸ್ ವೀಲರ್, ಹಂಗಾಮಿ ಹೈಕಮಿಷನರ್ಪ್ಯಾ ಟ್ರಿಕ್ ಹೆಬರ್ಟ್, ಉಪ ಹೈಕಮಿಷನರ್‌ ಮೇ ರಿ ಕ್ಯಾಥರೀನ್ ಜೋಲಿ, ಪ್ರಥಮ ಕಾರ್ಯದರ್ಶಿ; ಲಾನ್ ರಾಸ್ ಡೇವಿಡ್ ಟ್ರೈಟ್ಸ್, ಆಡಮ್ ಜೇಮ್ಸ್ ಚುಯಿಪ್ಕಾ, ಪ್ರಥಮ ಕಾರ್ಯದರ್ಶಿ; ಪೌಲಾ ಒರ್ಜುಯೆಲಾ ಅವರನ್ನು ದೇಶ ತೊರೆಯುವಂತೆ ಹೇಳಿದೆ. ಅಕ್ಟೋಬರ್ 19, 2024 ರ ಶನಿವಾರ ರಾತ್ರಿ 11:59 ರೊಳಗೆ ಅಥವಾ ಅದಕ್ಕೂ ಮೊದಲು ಭಾರತ ತೊರೆಯುವಂತೆ ಅವರಿಗೆ ಸೂಚಿಸಲಾಗಿದೆ” ಎಂದು ವಿದೇಶಾಂಗ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂಓದಿ: India Canada Row : ಬಿಗಡಾಯಿಸಿದ ಭಾರತ- ಕೆನಡಾ ಸಂಬಂಧ ; ಭಾರತದ ರಾಜತಾಂತ್ರಿಕರನ್ನು ವಾಪಸಾಗಲು ಸೂಚನೆ

ಸಿಖ್ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಗೆ ರಾಯಭಾರಿಯನ್ನು ಸಂಪರ್ಕಿಸುವ ಕೆನಡಾದ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ ನಂತರ ಭಾರತವು ತನ್ನ ಸ್ವಂತ ರಾಜತಾಂತ್ರಿಕರನ್ನು ಕರೆಸಿಕೊಂಡಿದೆ. ಈ ವೇಳೆ ನಮ್ಮವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಸ್ತುತ ಕೆನಡಾ ಸರ್ಕಾರದ ಬದ್ಧತೆಯಲ್ಲಿ ನಂಬಿಕೆ ಇಲ್ಲ ಎಂದು ಹೇಳಿದೆ.