Monday, 12th May 2025

ಪಂಚಾಯಿತಿ ಚುನಾವಣೆ: ಸ್ವತಂತ್ರ ಅಭ್ಯರ್ಥಿಗೆ ಸಿಕ್ಕಿದ್ದು ಒಂದೇ ವೋಟು !

ಅಹಮದಾಬಾದ್‌: ಗುಜರಾತ್‌ ರಾಜ್ಯದ ಸ್ಥಳೀಯ ಸಂಸ್ಥೆ ಪಂಚಾಯಿತಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಸಂತೋಷ್‌ ಹಲಪಟ್ಟಿ ತಮ್ಮ ಒಂದು ಮತವನ್ನು ಮಾತ್ರ ಪಡೆದಿದ್ದಾರೆ.

ಛಾರವಾಲ ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಸಂತೋಷ್‌ ಅವರ ಕುಟುಂಬ ದಲ್ಲಿ ಒಟ್ಟು 12 ಜನರು ಇದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಚುನಾವಣೆಗಳು ಬರುತ್ತವೆ, ಹೋಗುತ್ತವೆ. ನಾನು ಸೋತಿರುವುದಕ್ಕೂ ಹಾಗೂ ಮನೆಯವರು ಮತ ನೀಡದಿರುವುದಕ್ಕೂ ಬೇಸರ ಇಲ್ಲ ಎಂದು ಹೇಳಿದ್ದಾರೆ.

ಗುಜರಾತ್‌ ರಾಜ್ಯದಲ್ಲಿ ಇತ್ತೀಚೆಗೆ ಪಂಚಾಯಿತಿ ಚುನಾವಣೆ ನಡೆದಿತ್ತು. ಸುಮಾರು 6 ಸಾವಿರ ಪಂಚಾಯಿತಿಗಳ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಮೇಲುಗೈ ಸಾಧಿಸಿದೆ.