Sunday, 11th May 2025

ಐಐಟಿ ಬಾಂಬೆ ಕಟ್ಟಡದ ಫೋಟೋಗೆ ಫೋಟೋಶಾಪ್ ಧ್ವಜ…ಚಿತ್ರ ವೈರಲ್‌

ನವದೆಹಲಿ : ಭಾರತದ 76ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗಳು ತ್ರಿವರ್ಣ ಧ್ವಜವನ್ನ ಹಾರಿಸುವುದು, ಲೈಟ್ ಶೋ ಮತ್ತು ಫ್ಲ್ಯಾಶ್ ಮಾಬ್‌ಗಳಿಂದ ಹಿಡಿದು ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗ್ತಿದೆ.

ಆದರೆ, ಐಐಟಿ ಬಾಂಬೆ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತ ವಾಗಿ ವಿಭಿನ್ನ ವಿಧಾನ ಅನುಸರಿಸುವ ಭರದಲ್ಲಿ ತನ್ನ ಕಟ್ಟಡದ ಫೋಟೋವನ್ನ ಫೇಸ್ಬುಕ್‌ನಲ್ಲಿ ಹಂಚಿಕೊಂಡಿದೆ.

ಈ ಕಟ್ಟಡದ ಮೇಲ್ಭಾಗದಲ್ಲಿ ಸ್ಪಷ್ಟವಾಗಿ ಎಡಿಟ್ ಮಾಡಿದ ಧ್ವಜವನ್ನ ಹಾರಿಸಲಾಗಿದೆ.ಇದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಿಮ್ಮ ಕವರ್ ಫೋಟೋದಲ್ಲಿ ರಾಷ್ಟ್ರಧ್ವಜವನ್ನ ಹಾಕದಿದ್ದರೆ ಅದು ಒಳ್ಳೆಯ ದಿತ್ತು. ನೀವು ದೇಶಭಕ್ತಿ ಎಂದು ತೋರಿಸಲು ಈ ಎಡಿಟ್ ಮಾಡಿದ ಫೋಟೋ ನಿಜವಾಗಿಯೂ ಬೋಗಸ್ ಆಗಿದೆ. ನನ್ನ ವಿಶ್ವವಿದ್ಯಾಲಯದಿಂದ ಇದನ್ನ ನೋಡಲು ದುಃಖ ವಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.

‘ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆ ನಮ್ಮ ರಾಷ್ಟ್ರಧ್ವಜವನ್ನು ಏಕೆ ಫೋಟೋಶಾಪ್ ಮಾಡಬೇಕು?’ ಎಂದರೇ, ಮತ್ತೊಬ್ಬರು ‘ಆರಾಮವಾಗಿರಿ, ಮುಂಬೈನಲ್ಲಿ ಈಗ ಭೂಮಿ ಬೆಲೆ ಎಷ್ಟು ದುಬಾರಿಯಾಗಿದೆ ಎಂದು ಎಲ್ಲರಿಗೂ ತಿಳಿದಿದೆ, ಅವರು ಧ್ವಜಕ್ಕಾಗಿ ಸ್ಥಳ / ಭೂಮಿಯನ್ನ ಖರೀದಿಸಲು ಸಾಧ್ಯವಾಗಿಲ್ಲ’ ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನು ಮತ್ತೊಬ್ಬರು ಸ್ನ್ಯಾಪ್ ಚಾಟ್ ಫಿಲ್ಟರ್ ಬಳಸಿ ಧ್ವಜವನ್ನ ತಯಾರಿಸಲಾಗಿದೆಯೇ? ಎಂದು ಕೇಳಿದ್ದಾರೆ.