ಯಾವುದೇ ವೇತನ ಕಡಿತವಿಲ್ಲದೆ (no reduction in pay) ವಾರದಲ್ಲಿ ನಾಲ್ಕು ದಿನಗಳ ಕೆಲಸವನ್ನು (4 Day Work week) ಪರಿಚಯಿಸಿದ ಬಳಿಕ ಐಲ್ಯಾಂಡ್‌ನಲ್ಲಿ (Iceland ) ಆರ್ಥಿಕತೆ (Iceland Economy) ಚೇತರಿಕೆಯಾಗುತ್ತಿದೆ ಎಂದು ಹೊಸ ಸಂಶೋಧನೆ ವರದಿಯೊಂದು ಹೇಳಿದೆ.
2020 ಮತ್ತು 2022ರ ನಡುವೆ ಇಲ್ಲಿನ ಶೇ. 51ರಷ್ಟು ಕಾರ್ಮಿಕರು ಕಡಿಮೆ ಕೆಲಸದ ಸಮಯವನ್ನು ಸ್ವೀಕರಿಸಿದ್ದಾರೆ. ಇದರಿಂದ ಒಂದು ವರ್ಷದ ಅನಂತರ ಐಲ್ಯಾಂಡ್ ಹೆಚ್ಚಿನ ಯುರೋಪಿಯನ್ ರಾಷ್ಟ್ರಗಳಿಗಿಂತ ವೇಗವಾಗಿ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿತು.
2015 ಮತ್ತು 2019ರ ನಡುವೆ ನಡೆಸಿದ ಎರಡು ಪ್ರಯೋಗಗಳಲ್ಲಿ ಐಲ್ಯಾಂಡ್‌ನಲ್ಲಿ ಸಾರ್ವಜನಿಕ ವಲಯದ ಉದ್ಯೋಗಿಗಳು ಯಾವುದೇ ವೇತನ ಕಡಿತವಿಲ್ಲದೆ ವಾರಕ್ಕೆ 35- 36 ಗಂಟೆಗಳ ಕಾಲ ಕೆಲಸ ಮಾಡಿದರು.
ಈ ಕುರಿತು ಬಿಡುಗಡೆ ಮಾಡಲಾದ ಅಧ್ಯಯನದ ಪ್ರಕಾರ ಐಲ್ಯಾಂಡ್‌ನ ಪ್ರಾಯೋಗಿಕ ನಾಲ್ಕು ದಿನಗಳ ಕೆಲಸದ ವಾರವು ಅತ್ಯಂತ ಯಶಸ್ವಿಯಾಗಿದೆ ಎಂದು ಸಾಬೀತಾಗಿದೆ. ಇದು ಯಾವುದೇ ವೇತನ ಕಡಿತವಿಲ್ಲದೆ ಐಲ್ಯಾಂಡ್‌ನಲ್ಲಿ ಕಡಿಮೆ ಕೆಲಸದ ವಾರವನ್ನು ಪರಿಚಯಿಸಿದ ಕಾರ್ಯಕ್ರಮದ ಪ್ರಯೋಗದ ಕುರಿತು ಸಂಪೂರ್ಣ ವರದಿಯನ್ನು ನೀಡಿತು.
ಇದಾದ ಬಳಿಕ 2020 ಮತ್ತು 2022ರ ನಡುವೆ ದೇಶದ ಶೇ. 51ರಷ್ಟು ಕಾರ್ಮಿಕರು ನಾಲ್ಕು ದಿನಗಳ ವಾರ ಸೇರಿದಂತೆ ಕಡಿಮೆ ಕೆಲಸದ ಸಮಯವನ್ನು ಸ್ವೀಕರಿಸಿದ್ದಾರೆ. ಪ್ರಯೋಗದ ಅನಂತರ ಐಲ್ಯಾಂಡ್‌ನ ಆರ್ಥಿಕತೆಯು ಹೆಚ್ಚಿನ ಯುರೋಪಿಯನ್ ರಾಷ್ಟ್ರಗಳನ್ನು ಮೀರಿಸಿದೆ. ಮಾತ್ರವಲ್ಲದೆ ಐಲ್ಯಾಂಡ್‌ನಲ್ಲಿ ನಿರುದ್ಯೋಗ ದರವು ಯುರೋಪ್‌ನಲ್ಲಿ ಅತ್ಯಂತ ಕಡಿಮೆಯಾಗಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಹೆಚ್ಚಿನ ಕೆಲಸದ ಸ್ಥಳಗಳಲ್ಲಿ ಉತ್ಪಾದನೆ ಒಂದೇ ರೀತಿ ಆಗಿದ್ದು, ಇದರಲ್ಲಿ ಹೆಚ್ಚಿನ ಸುಧಾರಣೆಯು ಆಗಿದೆ. ಕಾರ್ಮಿಕರ ಆರೋಗ್ಯ, ಕೆಲಸ, ಜೀವನದ ಸಮತೋಲನ ಕೂಡ ಸುಧಾರಿಸಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಕೆಲಸದ ಸಮಯದ ಕಡಿತದ ಬಳಿಕ ದೇಶದ ಆರ್ಥಿಕತೆಯಲ್ಲೂ ಚೇತರಿಕೆಯಾಗಿದೆ. ಅಧ್ಯಯನದ ಪ್ರಕಾರ ಐಸ್‌ಲ್ಯಾಂಡ್‌ನ ಆರ್ಥಿಕತೆಯು 2023 ರಲ್ಲಿ ಸರಿಸುಮಾರು ಶೇ. 4.1ರಷ್ಟು ಬೆಳವಣಿಗೆಯಾಗಿದ್ದು, ನಿರುದ್ಯೋಗ ದರವು ಶೇ. 3.6ರಷ್ಟಾಗಿದೆ. ಕಡಿಮೆ ಕೆಲಸದ ವಾರದ ಬದಲಾವಣೆಯಿಂದ ಶೇ. 78ರಷ್ಟು ಕೆಲಸಗಾರರು ತಮ್ಮ ಪ್ರಸ್ತುತ ಕೆಲಸದ ಸಮಯದಲ್ಲಿ ತೃಪ್ತರಾಗಿದ್ದಾರೆ ಎಂಬುದು ತಿಳಿದುಬಂದಿದೆ.
ಕಡಿಮೆ ಕೆಲಸದ ಸಮಯದಿಂದ ಶೇ. 97ರಷ್ಟು ಕಾರ್ಮಿಕರಿಗೆ ತಮ್ಮ ಖಾಸಗಿ ಜೀವನ ಮತ್ತು ಕೆಲಸವನ್ನು ಸಮತೋಲನಗೊಳಿಸುವುದನ್ನು ಸುಲಭವಾಗಿಸಿದೆ. ಶೇ. 42ರಷ್ಟು ಜನರಿಗೆ ತಮ್ಮ ಖಾಸಗಿ ಜೀವನದ ಒತ್ತಡ ಕಡಿಮೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
EPFO ಚಂದಾದಾರರಿಗೆ ದೀಪಾವಳಿ ಸಿಹಿಸುದ್ದಿ, ಇಂದೇ ಖಾತೆಗೆ ಹಣ ಜಮಾ
ಪ್ರಪಂಚದಾದ್ಯಂತ ನಾಲ್ಕು ದಿನಗಳ ವಾರದ ಹಲವಾರು ಪ್ರಯೋಗಗಳು ನಡೆದಿವೆ. 2022 ರಲ್ಲಿ ಯುಎಸ್ ಮತ್ತು ಐರ್ಲೆಂಡ್‌ನ 33 ಕಂಪನಿಗಳಲ್ಲಿ ಪ್ರಯೋಗವನ್ನು ನಡೆಸಲಾಗಿದೆ.