Wednesday, 14th May 2025

ಹಿಮಾಚಲ ಪ್ರದೇಶದಲ್ಲಿ 4.1 ತೀವ್ರತೆ ಭೂಕಂಪ

ಶಿಮ್ಲಾ: ದೆಹಲಿ, ಪಂಜಾಬ್‌ ರಾಜ್ಯಗಳ ಬಳಿಕ ಹಿಮಾಚಲ ಪ್ರದೇಶದಲ್ಲೂ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ.

ಬುಧವಾರ ರಾತ್ರಿ 9:32 ರ ಸುಮಾರಿಗೆ ರಾಜ್ಯದ ಕೆಲವು ಭಾಗಗಳಲ್ಲಿ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪನ ಸಂಭವಿ ಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಇಲಾಖೆ ತಿಳಿಸಿದೆ. ಹಿಮಾಚಲದ ವಾಯವ್ಯದಲ್ಲಿರುವ ಮಂಡಿ ಹಾಗೂ ಕಾಂಗ್ರಾ ಪಟ್ಟಣಗಳಿಂದ 27 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.

ಕಳೆದ ಹದಿನೈದು ದಿನಗಳಿಂದ ಉತ್ತರದ ರಾಜ್ಯಗಳು ಹಾಗೂ ಹಿಮಾಲಯ ಪರ್ವತ ವಲಯದಲ್ಲಿ ಹಲವು ಸಲ ಭೂಕಂಪನ ವಾಗಿದೆ. ಕಳೆದ ವಾರದಲ್ಲಿ ದೆಹಲಿ ಹಾಗೂ ಪಂಜಾಬ್‌ ರಾಜ್ಯಗಳಲ್ಲೂ ಭೂಮಿ ಕಂಪಿಸಿತ್ತು.