Wednesday, 14th May 2025

ಇಚ್ಚೆಯಂತೆ ಹೊಲಿಯದ ರವಿಕೆ: ಮಹಿಳೆ ಆತ್ಮಹತ್ಯೆ

ಹೈದರಾಬಾದ್: ಪತಿ ತನ್ನ ಇಚ್ಚೆಯಂತೆ ರವಿಕೆ ಹೊಲಿದು ಕೊಟ್ಟಿಲ್ಲ ಎಂದು ಬೇಸರಗೊಂಡ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀನಿವಾಸ್ ಎಂಬವರ ಪತ್ನಿ ವಿಜಯಲಕ್ಷ್ಮಿ (36) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ದಂಪತಿ ಹೈದರಾಬಾದ್‍ನ ಅಂಬರ್‍ಪೇಟೆ ಯಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ಟೈಲರ್ ಆಗಿದ್ದು, ಸೀರೆ ವ್ಯಾಪಾರ ಕೂಡ ಮಾಡುತ್ತಿದ್ದರು.

ತಮ್ಮ ಪತ್ನಿ ವಿಜಯಲಕ್ಷ್ಮಿಗೆ ರವಿಕೆ ಹೊಲಿದುಕೊಟ್ಟಿದ್ದಾರೆ. ಆದರೆ, ಆಕೆಗೆ ರವಿಕೆ ಇಷ್ಟವಾಗಿರಲಿಲ್ಲ. ಇಬ್ಬರ ನಡುವೆ ಜಗಳವಾಗಿದೆ. ಬಳಿಕ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಮಧ್ಯಾಹ್ನ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ತಟ್ಟಿದರೂ ಪ್ರತಿಕ್ರಿಯಿಸಿಲ್ಲ.

ಪತಿ ಶ್ರೀನಿವಾಸ್ ಬಾಗಿಲು ಬಡಿದು ನೋಡಿದಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.