Thursday, 15th May 2025

ಹೊಟೇಲ್‌ನಲ್ಲಿ ಅಗ್ನಿ ಅವಘಡ: ಇಬ್ಬರ ಸಾವು

ಕ್ನೋ: ಮಥುರಾದ ವೃಂದಾವನದಲ್ಲಿರುವ ಹೊಟೇಲ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಉಮೇಶ್ (30) ಮತ್ತು ಬೀರಿ ಸಿಂಗ್ (40) ಎಂದು ಗುರುತಿಸಲಾಗಿದೆ. ಅವರಿಬ್ಬರೂ ಹೋಟೆಲ್‌ನ ಉದ್ಯೋಗಿಗಳಾ ಗಿದ್ದರು. ಎರಡು ಆಂಬ್ಯುಲೆನ್ಸ್‌ಗಳು ಮತ್ತು ಎರಡು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಧಾವಿಸಿ ರಕ್ಷಣ ಕಾರ್ಯವನ್ನು ನಡೆಸಿವೆ.

ಹೊಟೇಲ್‌ನ ಮೇಲಿನ ಮಹಡಿಯಲ್ಲಿರುವ ಕಿಚನ್ ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿ ಕೊಂಡಿದೆ.

ಹೋಟೆಲ್‌ನಲ್ಲಿ ಸುಮಾರು 100 ಅತಿಥಿಗಳು ಉಳಿದುಕೊಂಡಿದ್ದರು. ನಾವು ಕೂಡಲೆ ಅವರೆಲ್ಲರನ್ನು ಸ್ಥಳಾಂತರಿಸಿದೆವು. ಅಗ್ನಿ ಶಾಮಕ ಇಲಾಖೆಯು ಒಂದೂವರೆ ಗಂಟೆಗಳ ಹೋರಾಟದ ನಂತರ ಬೆಂಕಿಯನ್ನು ಹತೋಟಿಗೆ ತಂದಿದೆ” ಎಂದು ಮಥುರಾದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಶರ್ಮಾ ತಿಳಿಸಿದ್ದಾರೆ.

ವೃಂದಾವನದ ಎಸ್‌ಎಚ್‌ಒ ಸೂರಜ್ ಶರ್ಮಾ, ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದು ತೋರುತ್ತದೆ ಎಂದು ಹೇಳಿದ್ದಾರೆ.