ಶಿಮ್ಲಾ: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಆನಿ ಉಪವಿಭಾಗದಲ್ಲಿ ಮಂಗಳವಾರ(ಡಿಸೆಂಬರ್ 10) ಬೆಳಿಗ್ಗೆ 25 ರಿಂದ 30 ಪ್ರಯಾಣಿಕರನ್ನು ಹೊತ್ತ ಖಾಸಗಿ ಬಸ್(Himachal Tragedy) ಆಳವಾದ ಕಮರಿಗೆ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕುಲ್ಲು ಜಿಲ್ಲಾಧಿಕಾರಿ ಟೊರುಲ್ ಎಸ್ ರವೀಶ್ ತಿಳಿಸಿದ್ದಾರೆ.ಗಾಯಗೊಂಡ ಪ್ರಯಾಣಿಕರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆಯಂತೆ.
Big Accident in Himachal Pradesh: कुल्लू के आनी में निजी बस मोड से गिरी. 20-25 लोग थे सवार. कई लोगों की मौत की आशंका.@CMOFFICEHP @DCKullu @PoliceKullu #himachalaccident #Accidente #kullu pic.twitter.com/8yRPiQoiJM
— Vinod Katwal (@Katwal_Vinod) December 10, 2024
ಕಳೆದ ತಿಂಗಳು, ಉತ್ತರಾಖಂಡದಲ್ಲಿ ಬೆಳಿಗ್ಗೆ ಜನದಟ್ಟಣೆಯಿಂದ ತುಂಬಿದ ಬಸ್ವೊಂದು ವೇಗವಾಗಿ ಬಂದು ಬಸ್ ಹೆದ್ದಾರಿಯಲ್ಲಿ ಹರಿತವಾದ ತಿರುವಿನಿಂದ 200 ಮೀಟರ್ ಕಮರಿಗೆ ಬಿದ್ದ ಪರಿಣಾಮ 36 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಜನರು ಗಾಯಗೊಂಡಿದ್ದಾರೆ. ದೀಪಾವಳಿ ಹಬ್ಬವನ್ನು ಮುಗಿಸಿ ಕೆಲಸಕ್ಕೆ ಮರಳುತ್ತಿದ್ದ ಜನರನ್ನು ಹೊತ್ತ ಬಸ್ ಪೌರಿ ಗರ್ವಾಲ್ ಜಿಲ್ಲೆಯ ಧುಮಾಕೋಟ್ನಿಂದ ಸುಮಾರು 72 ಕಿ.ಮೀ ದೂರದಲ್ಲಿರುವ ನೈನಿತಾಲ್ನ ರಾಮನಗರಕ್ಕೆ ಸಂಚರಿಸುತ್ತಿತ್ತು.
ಈ ಸುದ್ದಿಯನ್ನೂ ಓದಿ:ಕೈದಿಯ ಗುದದ್ವಾರದಲ್ಲಿತ್ತು ಮೊಬೈಲ್ ಫೋನ್; ಎಕ್ಸ್ರೇಯಿಂದ ಶಾಕಿಂಗ್ ಸಂಗತಿ ಬಯಲು
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ (Jammu&Kashmir ) ಕಥುವಾ ಜಿಲ್ಲೆಯಲ್ಲಿ ಸೇನಾ ವಾಹನವೊಂದು ಆಳವಾದ ಕಮರಿಗೆ ಉರುಳಿ ಬಿದ್ದ ಪರಿಣಾಮ ಸೇನಾ ಜವಾನರೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಾಹನದಲ್ಲಿದ್ದ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಚೇಡಿ-ಬಿಲ್ಲಾವರ್ ರಸ್ತೆಯ ಸುಕ್ರಲಾ ದೇವಿ ದೇವಸ್ಥಾನದ ಬಳಿ ಶುಕ್ರವಾರ ಸೈನಿಕರು ಗಸ್ತು ತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.