Monday, 12th May 2025

ಮಾಲೆಗಾಂವ್‌ನಲ್ಲಿ ‘ಹಿಜಾಬ್’ ಪ್ರತಿಭಟನೆ

ಮಾಲೆಗಾಂವ್: ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಕರ್ನಾಟಕದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಭಾರಿ ಪ್ರತಿಭಟನೆ ನಡೆಯುತ್ತಿದೆ.

ಬುರ್ಕಾ ಮತ್ತು ಹಿಜಾಬ್ ಧರಿಸಿದ ಸಾವಿರಾರು ಮುಸ್ಲಿಂ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಹಿಜಾಬ್ ನಮ್ಮ ಹಕ್ಕು, ನಿಷೇಧವನ್ನು ಹಿಂಪಡೆ ಯಿರಿ ಎಂದು ಆಗ್ರಹಿಸಿರುವ ಪ್ರತಿ ಭಟನಾಕಾರರು, ಫೆ.11 ಅನ್ನು ಹಿಜಾಬ್ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದ್ದಾರೆ ಎಂದು ವರದಿ ಮಾಡಿದೆ.

ಪೊಲೀಸರಿಂದ ಅನುಮತಿ ಪಡೆಯದೆ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಆಯೋಜಿಸಿದ್ದ 4 ಸಂಘಟನೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆ ಯಲ್ಲಿ ಭಾಗವಹಿಸಿ, ಭಾಷಣ ಮಾಡಿದ ಎಐಎಂಐಎಂ ಪಕ್ಷದ ಸ್ಥಳೀಯ ಶಾಸಕರೊಬ್ಬರಿಗೂ ನೋಟಿಸ್ ನೀಡಲಾಗಿದೆ.