Thursday, 15th May 2025

ಪ್ರವಾಹಕ್ಕೆ ಸಿಲುಕಿದ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್, ಇಬ್ಬರು ನಾಪತ್ತೆ

ನಾಗ್ಪುರ : ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮಂಗಳವಾರ ಬೆಳಿಗ್ಗೆ ಉಮರ್ಖೆಡೆ ಯಲ್ಲಿ ಪ್ರವಾಹಕ್ಕೆ ಸಿಲುಕಿ, ಚಾಲಕ ನೀರಿನಲ್ಲಿ ಮುಳುಗಿರುವ ಸೇತುವೆಯನ್ನು ದಾಟಲು ಪ್ರಯತ್ನಿಸಿದಾಗ ಬಸ್ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.

ಬಸ್ ನಾಂದೇಡ್-ನಾಗ್ಪುರ ಮಾರ್ಗದಲ್ಲಿ ಚಲಿಸುತ್ತಿತ್ತು ಮತ್ತು ಐದು ಪ್ರಯಾಣಿಕರನ್ನು ಕರೆದೊಯ್ಯು ತ್ತಿತ್ತು. ಮೂವರನ್ನು ರಕ್ಷಿಸಲಾಗಿದೆ, ಅದರಲ್ಲಿ ಒಬ್ಬರು ಗಂಭೀರರಾಗಿದ್ದಾರೆ, ಇಬ್ಬರು ನಾಪತ್ತೆಯಾಗಿ ದ್ದಾರೆ.

ವಿದರ್ಭ ಮತ್ತು ಮರಾಠವಾಡ ಪ್ರದೇಶಗಳಲ್ಲಿ ಸೋಮವಾರದಿಂದ ಮಳೆ ಸುರಿಯುತ್ತಿರುವುದರಿಂದ ಹಲವಾರು ತೊರೆಗಳು ಮತ್ತು ನದಿಗಳು ತುಂಬಿ ಹರಿಯುತ್ತಿವೆ. ತಹಶೀಲ್ದಾರ್ ಆನಂದ್ ದುಲ್ಗಾಂವ್ಕರ್ ಮತ್ತು ಉಮರ್ಖೇಡ್ ನ ತನೇದಾರ್ ಅಮೋಲ್ ಮಾಳ್ವೆ ಸ್ಥಳಕ್ಕೆ ಧಾವಿಸಿದರು.

ಬಸ್ ಕೊಚ್ಚಿ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Leave a Reply

Your email address will not be published. Required fields are marked *