Saturday, 10th May 2025

Health tips: ಕೊಬ್ಬಿನಾಂಶ ಇರುವ ಆಹಾರ ಸೇವನೆಯಿಂದ ಆರೋಗ್ಯ ಭಾಗ್ಯ ಖಂಡಿತ!

Fat health

ನವದೆಹಲಿ: ಸಾಮಾನ್ಯವಾಗಿ ಕೊಬ್ಬಿನಾಂಶ ಹೆಚ್ಚಿರುವ ಆಹಾರಗಳನ್ನು ಆದಷ್ಟು ದೂರ ಇಡಿ ಎಂದು ಎಲ್ಲರೂ ಸಲಹೆ ನೀಡುತ್ತಾರೆ. ಆದರೆ ದೇಹಕ್ಕೆ ಪೌಷ್ಠಿಕಾಂಶ ಇರುವ ಆಹಾರ ಎಷ್ಟು ಮುಖ್ಯವೋ ಅಷ್ಟೇ ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳೂ ದೇಹಕ್ಕೆ ಮುಖ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ. ನೈಸರ್ಗಿಕವಾಗಿ ಸಿಗುವಂತಹ ಆಹಾರ ಸೇವಿಸಿದರೆ  ಒಳ್ಳೆಯ ಕೊಬ್ಬಿನ ಅಂಶಗಳು (Healthy Fats) ನಮ್ಮ ಆರೋಗ್ಯವನ್ನು ವೃದ್ಧಿಸಲು ನೆರವಾಗುತ್ತವೆ(Health tips).

ಆರೋಗ್ಯಕರ ಕೊಬ್ಬುಗಳು ಸಮತೋಲಿತ ಆಹಾರದ ಅತ್ಯಗತ್ಯ ಭಾಗವಾಗಿದ್ದು ಕೊಬ್ಬುಗಳಲ್ಲಿ ಎಲ್ಲವೂ ಅನಾರೋಗ್ಯಕರವಲ್ಲ. ಕೆಟ್ಟ ಕೊಬ್ಬು ಇರುವ ಆಹಾರ ಪದಾರ್ಥ ತ್ಯಜಿಸಿ, ದೇಹಕ್ಕೆ ಒಳ್ಳೆಯ ಕೊಬ್ಬು ನೀಡುವಂತಹ ಆಹಾರಗಳನ್ನು ಸೇವಿಸದರೆ ಉತ್ತಮ. ಕೊಬ್ಬು ಒಂದು ರೀತಿಯ ಪೋಷಕಾಂಶ ಇದ್ದ ಹಾಗೆ, ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ ಒದಗಿಸಲಿದ್ದು ಯಾವ ಆಹಾರ ಸೇವಿಸಿದರೆ ಉತ್ತಮ ಎನ್ನುವ ಮಾಹಿತಿ ಇಲ್ಲಿದೆ.

ಡಾರ್ಕ್ ಚಾಕಲೇಟ್‌:

ಡಾರ್ಕ್ ಚಾಕಲೇಟ್‌  ಈ ಸಿಹಿ ಪದಾರ್ಥ ದಲ್ಲಿಯೂ ಕೂಡ ಉತ್ತಮ ಕೊಬ್ಬಿನ ಅಂಶ ಹಾಗೂ ಕಡಿಮೆ ಪ್ರಮಾಣದ ಕ್ಯಾಲೋರಿಗಳು  ಇರಲಿದ್ದು ಡಾರ್ಕ್ ಚಾಕೊಲೇಟ್ ನಲ್ಲಿ ಬೆಣ್ಣೆಯಿಂದ ಮಾಡಿದಂತಹ  ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ಜೊತೆಗೆ ಕಬ್ಬಿಣ, ಮೆಗ್ನೀಸಿಯಮ್ ಮತ್ತು ಫೈಬರ್ ಅಂಶ ಇರುವುದರಿಂದ ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ವಾಲ್ನಟ್:

ವಾಲ್ಲಟ್  ತಿನ್ನುವುದರಿಂದ ದೇಹಕ್ಕೆ ಬಹಳಷ್ಟು ಆರೋಗ್ಯಕರ ಪ್ರಯೋಜನ ಇದೆ  ಬಾದಾಮಿ, ವಾಲ್‌ನಟ್ಸ್ ಮತ್ತು ಗೋಡಂಬಿ ಗಳಂತಹ ಬೀಜಗಳಲ್ಲಿ  ಆರೋಗ್ಯಕರ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇವು  ದೇಹಕ್ಕೆ  ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಸಹ ಒದಗಿಸುತ್ತವೆ. ವಾಲ್‌ನಟ್‌ನಲ್ಲಿ ವಿಶೇಷವಾಗಿ ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಆಲಿವ್ ಎಣ್ಣೆ:

ಆಲಿವ್ ಎಣ್ಣೆ ಕೂಡ ಅಷ್ಟೇ, ಈ ಎಣ್ಣೆಯ ಬೆಲೆ ತುಂಬಾನೇ ದುಬಾರಿ ಆದರೂ ಇದರ ಬಳಕೆ ದೇಹಕ್ಕೆ ಉತ್ತಮ. ಇದರಿಂದ ಹೃದಯಕ್ಕೆ  ಆರೋಗ್ಯಕರ ಪ್ರಯೋಜನಗಳು ಸಿಗಲಿದ್ದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೊಬ್ಬಿನ ಮೀನು:

ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲ ಆಗಿದ್ದು  ಉತ್ತಮ ಗುಣಮಟ್ಟದ ಪ್ರೋಟೀನ್, ಮತ್ತು ಬಿ12 ಮತ್ತು ಡಿ.ಒಮೆಗಾ-3 ಕೊಬ್ಬಿ ನಾಮ್ಲ ಗಳಂತಹ ಅಗತ್ಯ ಜೀವ ಸತ್ವಗಳನ್ನು ನೀಡಲಿದೆ‌‌.ಹಾಗಾಗಿ ಮಾಂಸಹಾರಿ ಅಂತ ಬಂದಾಗ ಮೀನಿಗೆ ಮೊದಲ ಆಧ್ಯತೆ ನೀಡಿ. ಮೀನಿನ ಸೇವನೆಯಿಂದ  ಹೃದಯದ ಆರೋಗ್ಯ, ಮೆದುಳಿನ ಕಾರ್ಯ  ಮತ್ತು ಉರಿಯೂತ ವನ್ನು ಕಡಿಮೆ ಮಾಡುತ್ತದೆ.  ಹಾಗಾಗಿ ಮೀನಿನ ಸೇವನೆ ಉತ್ತಮ

ಆವಕಾಡೊ:

ಇದು ಮೊನೊಸಾಚುರೇಟೆಡ್ ಕೊಬ್ಬುಗಳಿಂದ ಕೂಡಿದ್ದು ಇದು ಹೃದಯದ ಆರೋಗ್ಯ ಪ್ರಯೋಜನ‌ ನೀಡಲಿದೆ. ಇದು ಫೈಬರ್, ವಿಟಮಿನ್ ಸಿ, ಇ,  ಮತ್ತು ವಿವಿಧ ಬಿ ಜೀವಸತ್ವಗಳನ್ನು ಸಹ ಒದಗಿಸುತ್ತದೆ. ಆವಕಾಡೊದಲ್ಲಿನ ಆರೋಗ್ಯಕರ ಕೊಬ್ಬುಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಬೀಜಗಳ ಸೇವನೆ:

ಚಿಯಾ, ಅಗಸೆಬೀಜಗಳು ಮತ್ತು ಕುಂಬಳಕಾಯಿ ಬೀಜಗಳ ಸೇವನೆ ದೇಹಕ್ಕೆ ಬಹಳ ಒಳಿತು. ಆರೋಗ್ಯಕರ ಕೊಬ್ಬುಗಳಲ್ಲಿ ಈ ಬೀಜಗಳು  ಸಮೃದ್ಧವಾಗಿದ್ದು  ವಿಶೇಷವಾಗಿ ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಇರುತ್ತದೆ. ಅವು ಪ್ರೋಟೀನ್, ಫೈಬರ್ ಮತ್ತು ಅಗತ್ಯ ಪೋಷಕಾಂಶ‌ ಗಳನ್ನು ಸಹ ನೀಡುತ್ತವೆ.  ಚಿಯಾ ಮತ್ತು ಅಗಸೆಬೀಜಗಳು ಹೆಚ್ಚಿನ ಒಮೆಗಾ 3 ಅಂಶಕ್ಕೆ ಹೆಸರುವಾಸಿಯಾಗಿದೆ, ಇದು ಹೃದಯದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಇದರ ಫೈಬರ್ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ

ಮೊಟ್ಟೆ ಸೇವನೆ:

ಮೊಟ್ಟೆಯು  ಪೌಷ್ಟಿಕಾಂಶದ   ಕೇಂದ್ರವಾಗಿದ್ದು, ಆರೋಗ್ಯಕರ ಕೊಬ್ಬು  ಮತ್ತು ಅಗತ್ಯವಾದ ಜೀವಸತ್ವ ಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ.ಹಾಗಾಗಿ  ವಾರದಲ್ಲಿ ಎರಡು ದಿನಕ್ಕಾದರೂ  ಮೊಟ್ಟೆ ತಿನ್ನುವ ಅಭ್ಯಾಸ ಮಾಡಿಕೊಳ್ಳಿ

ತೆಂಗಿನ ಎಣ್ಣೆ:

ತೆಂಗಿನಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿ ನಾಂಶಗಳು ಹೆಚ್ಚಾಗಿ  ಇರಲಿದ್ದು ತೆಂಗಿನ ಎಣ್ಣೆಯ ಉತ್ಪನ್ನ ಜೀರ್ಣವಾಗುವ ಕೊಬ್ಬುಗಳಾಗಿವೆ. ಇದು ಫೈಬರ್ ಮತ್ತು ಖನಿಜಗಳನ್ನು ಸಹ ಹೊಂದಿದ್ದು ಇದು ನಿಮ್ಮ ಆಹಾರಕ್ಕೆ ಸೇರಿಸಿಕೊಂಡರೆ ಉತ್ತಮ.

ಈ ಸುದ್ದಿಯನ್ನೂ ಓದಿ:Ratan Tata Death: 1 ರೂ. ಮೆಸೇಜ್‌ನಿಂದ 2,000 ಕೋಟಿ ರೂ. ಮೌಲ್ಯದ ಟಾಟಾ ನ್ಯಾನೋ ಘಟಕ ಪ.ಬಂಗಾಳದಿಂದ ಗುಜರಾತ್‌ಗೆ ಶಿಫ್ಟ್‌ ಆದ ಕಥೆ