Sunday, 11th May 2025

ಗೋಲ್ಡ್: ಹಾಲ್ ಮಾರ್ಕ್ ಕಡ್ಡಾಯ ಅವಧಿ ವಿಸ್ತರಣೆ

ಮುಂಬೈ : ಚಿನ್ನದ ಆಭರಣ ತಯಾರಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೇಂದ್ರ ಸರ್ಕಾರ, ಗೋಲ್ಡ್ ಹಾಲ್ ಮಾರ್ಕ್ ಕಡ್ಡಾಯ ಕುರಿತ ಅವಧಿಯನ್ನು ನವೆಂಬರ್ 30, 2021ರವರೆಗೆ ವಿಸ್ತರಿಸಿದೆ. ಇತ್ತೀಚೆಗೆ ನಡೆದ ಸಲಹಾ ಸಮಿತಿ ಸಭೆ ನಡೆದ ನಂತರ ವಾಣಿಜ್ಯ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಗೋಲ್ಡ್ ಹಾಲ್ ಮಾರ್ಕ್ ಯೋಜನೆಯನ್ನು ಸುಗಮವಾಗಿ ಜಾರಿಗೆ ತರಲು ಮತ್ತು ಇಡೀ ಪ್ರಕ್ರಿಯೆಯಲ್ಲಿ ಯಾವುದೇ ಸವಾಲುಗಳನ್ನು ತೊಡೆದುಹಾಕಲು ಸ್ಥಾಪಿಸಲಾದ ಸಲಹಾ ಸಮಿತಿಯು 2021 ರ ಆಗಸ್ಟ್ 28 ರಂದು ಕೊನೆಯ ಬಾರಿಗೆ ಸಭೆ ಸೇರಿತ್ತು.

ಯೋಜನೆಯ ಮಾನದಂಡಗಳ ಅನುಸರಣೆಗಾಗಿ ಚಿನ್ನದ ಆಭರಣ ( gold jewelers ) ತಯಾರಕರಿಗೆ ಆಗಸ್ಟ್ 31ರ ಗಡುವನ್ನು ನೀಡಲಾಯಿತು. ಈ ಅಂತಿಮ ಗಡುವನ್ನು ಇದೀಗ ನವೆಂಬರ್ 30, 2021ರವರೆಗೆ ವಿಸ್ತರಿಸಲಾಗಿದೆ.

ಒಂದು ವೇಳೆ ಚಿನ್ನದ ವ್ಯಾಪಾರಿಗಳು, ಹಾಲ್ ಮಾರ್ಕ್ ಕಡ್ಡಾಯವಾಗಿ ಹಾಕದೇ ಸಿಕ್ಕಿಬಿದ್ದರೇ, ತಪ್ಪಿತಸ್ಥನೆಂದು ಸಾಬೀತಾದರೆ, ಆಭರಣ ವ್ಯಾಪಾರಿಯು ನಗದು ದಂಡದಿಂದ ಜೈಲು ಶಿಕ್ಷೆಯವರೆಗೆ ಸಹ ಒಳಗೊಂಡಿರುವ ಕ್ರಮವನ್ನು ಎದುರಿಸಬಹುದು.

ಗಡುವಿನ ವಿಸ್ತರಣೆಯನ್ನು ಅನುಮತಿಸಲಾಗಿದೆ. ಇದರಿಂದ ಹೊಸ ವ್ಯವಸ್ಥೆಯು ಸುಗಮವಾಗಿ ನೆಲೆಗೊಳ್ಳುತ್ತದೆ ಮತ್ತು ಮಧ್ಯಸ್ಥಗಾರರು ಸಹ ಹೊಸ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಾಗುತ್ತದೆ.

ಚಿನ್ನದ ಶುದ್ಧತೆ ಮತ್ತು ಸೌಂದರ್ಯವನ್ನು ಪ್ರಮಾಣೀಕರಿಸುವ ಪ್ರಕ್ರಿಯೆಯನ್ನು ಹಾಲ್ ಮಾರ್ಕ್ ಎಂದು ಕರೆಯಲಾಗುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಎಂಬುದು ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಬಾಡಿ ಆಫ್ ಇಂಡಿಯಾ ಆಗಿದೆ. ಬಿಐಎಸ್ ಕಾಯ್ದೆಯ ಪ್ರಕಾರ, ಚಿನ್ನದ ಆಭರಣಗಳ ಹಾಲ್ ಮಾರ್ಕ್ ಅಗತ್ಯವಿದೆ. ಹಾಲ್ ಮಾರ್ಕ್ ಮಾಡುವುದು ಗ್ರಾಹಕರಿಗೆ ಚಿನ್ನದ ಶುದ್ಧತೆಯನ್ನು ಬಹಿರಂಗಪಡಿಸುತ್ತದೆ.

 

Leave a Reply

Your email address will not be published. Required fields are marked *