Sunday, 11th May 2025

ಬೊಮ್ಮಾಯಿ ನೇತೃತ್ವದಲ್ಲಿ ನ.27ರಂದು ಜಿಎಸ್‌ಟಿ ಸಭೆ

Bommai

ನವದೆಹಲಿ: ಜಿಎಸ್‌ಟಿಯ ಹಾಲಿ ಇರುವ ಹಂತಗಳ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ಸಚಿವರ ಗುಂಪಿನ ಸಭೆ ನ.27ರಂದು ನಡೆಯಲಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ, ಹಾಲಿ ಇರುವ ತೆರಿಗೆ ಸ್ಲ್ಯಾಬ್ ಗಳ ಬಗ್ಗೆ ಮತ್ತು ಇತರ ವಿಚಾರಗಳ ಬಗ್ಗೆ ಪರಾಮರ್ಶೆ ನಡೆಸಲಿದೆ.

ಶೇ.12 ಮತ್ತು ಶೇ.18ರ ತೆರಿಗೆ ಹಂತಗಳನ್ನು ವಿಲೀನಗೊಳಿಸುವ ಬಗ್ಗೆಯೂ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವು ವಸ್ತುಗಳಿಗೆ ತೆರಿಗೆ ಪ್ರಮಾಣ ಹಾಲಿ ಇರುವ ಶೇ.3ರಿಂದ ಶೇ.5ರ ವರೆಗೆ ಏರಿಕೆ ಮಾಡುವ ನಿಟ್ಟಿನಲ್ಲಿಯೂ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಸಭೆಯ ಶಿಫಾರಸುಗಳನ್ನು ಜಿಎಸ್‌ಟಿ ಮಂಡಳಿಗೆ ಸಲ್ಲಿಸಲಾಗುತ್ತದೆ.