Tuesday, 13th May 2025

ಜಿಎಸ್‌ಟಿ ಮಂಡಳಿಯ 46ನೇ ಸಭೆ ಇಂದು

Nirmala Sitharaman

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವ ದಲ್ಲಿ ಜಿಎಸ್‌ಟಿ ಮಂಡಳಿಯ 46ನೇ ಸಭೆ ಶುಕ್ರವಾರ ಹೊಸದಿಲ್ಲಿ ಯಲ್ಲಿ ನಡೆಯಲಿದೆ.

ಷಉಡುಗೆ ಮತ್ತು ಪಾದರಕ್ಷೆ ಮೇಲಿನ ಜಿಎಸ್‌ಟಿಯನ್ನು ಏರಿಕೆ ಮಾಡುವ ನಿರ್ಧಾರವನ್ನು ಈ ಸಂದರ್ಭದಲ್ಲಿ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ.

ತೆರಿಗೆ ಪದ್ಧತಿಯಲ್ಲಿ ತರಬೇಕಾಗಿರುವ ಬದಲಾವಣೆ ಮತ್ತು ದರ ಪರಿಷ್ಕರಣೆ ಯ ಬಗ್ಗೆಯೂ ಸಭೆಯಲ್ಲಿ ಪರಾಮರ್ಶೆ ನಡೆಸುವ ಸಾಧ್ಯತೆ ಗಳು ಇವೆ. ಅದಕ್ಕೆ ಪೂರಕವಾಗಿ ಜಿಎಸ್‌ಟಿ ಪರಿಹಾರ ಸೆಸ್‌ ನೀಡಿಕೆ ಮತ್ತು ಕೇಂದ್ರ ರಾಜ್ಯ ಸರಕಾರ‌ಗಳಿಗೆ ತೆರಿಗೆಯಲ್ಲಿ ನೀಡಬೇಕಾಗಿ ರುವ ಪಾಲಿನ ವಿತರಣೆಯನ್ನು ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಬೇಕು ಎಂದು ರಾಜ್ಯಗಳು ಮನವಿ ಮಾಡಿವೆ.

ವ್ಯಾಟ್‌ ಸೇರಿದಂತೆ ಸ್ಥಳೀಯ ತೆರಿಗೆಗಳು ರಾಜ್ಯ ಸರಕಾರ‌ಗಳು ವಿಧಿಸುತ್ತಿದ್ದು, ಮುಂದಿನ ವರ್ಷದ ಜೂನ್‌ಗೆ ಮುಕ್ತಾಯವಾಗಲಿವೆ.