Monday, 12th May 2025

ಭೋಪಾಲ್‌ನಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅಂತ್ಯಕ್ರಿಯೆ

Varun SIngh Cremation

ಭೋಪಾಲ್: ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನಗೊಂಡ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ಭೋಪಾಲ್‌ ನಲ್ಲಿ ಸಂಪೂರ್ಣ ಮಿಲಿಟರಿ ಮತ್ತು ಸರ್ಕಾರಿ ಗೌರವ ಗಳೊಂದಿಗೆ ಅಂತಿಮ ವಿಧಿ ವಿಧಾನ ನಡೆಸ ಲಾಯಿತು.

ತ್ರಿವರ್ಣ ಧ್ವಜದಲ್ಲಿ ಸುತ್ತಿ, ಪಾರ್ಥಿವ ಶರೀರವನ್ನು ಮಿಲಿಟರಿ ಆಸ್ಪತ್ರೆಯಿಂದ ಇಲ್ಲಿನ ಬೈರಾಗರ್ ಪ್ರದೇಶದ ಸ್ಮಶಾನ ಭೂಮಿಗೆ ಹೂವಿನ ಹಾಸಿಗೆಯ ಸೇನಾ ಟ್ರಕ್‌ನಲ್ಲಿ ತರಲಾಯಿತು. ದಾರಿಯುದ್ದಕ್ಕೂ ಜನರು ‘ಭಾರತ್ ಮಾತಾ ಕಿ ಜೈ’ ಮತ್ತು ‘ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅಮರ್ ರಹೇ’ ಘೋಷಣೆ ಗಳನ್ನು ಕೂಗಿದರು. ಹಿರಿಯ ಸೇವಾ ಅಧಿಕಾರಿಗಳು ಗ್ರೂಪ್ ಕ್ಯಾಪ್ಟನ್ ಅವರ ಶವಪೆಟ್ಟಿಗೆಗೆ ಪುಷ್ಪಾ ರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವ್ ಸಾರಂಗ್ ಕೂಡ ಗೌರವ ಸಲ್ಲಿಸಿದರು. ಕಿರಿಯ ಸಹೋದರ, ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಮತ್ತು ಅವರ ಮಗ ಅಂತ್ಯಕ್ರಿಯೆ ಮಾಡಿದರು.

ವರುಣ್ ಸಿಂಗ್ ಅವರ ಪತ್ನಿ ಮತ್ತು ಮಗಳು, ಅವರ ತಂದೆ ಕರ್ನಲ್ ಕೆ ಪಿ ಸಿಂಗ್ (ನಿವೃತ್ತ), ತಾಯಿ ಉಮಾ ಅವರಲ್ಲದೆ, ಇತರ ನಿಕಟ ಸಂಬಂಧಿಗಳು ಸಹ ಅಲ್ಲಿ ಹಾಜರಿದ್ದರು.