Monday, 12th May 2025

ಕಾಂಗ್ರೆಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದೆನಿಸುತ್ತದೆ: ಗುಲಾಂ ನಬಿ ಆಜಾದ್

ದೋಡಾ: ಪಕ್ಷ ಬಲಪಡಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಅನಿಸುತ್ತದೆ ಎಂದು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ದೋಡಾದಲ್ಲಿ ಮಾತನಾಡುತ್ತಿದ್ದ ಗುಲಾಂ ನಬಿ ಆಜಾದ್ ಅವರು , ಈ ಹಿಂದೆ 23 ನಾಯಕರು ಕಾಂಗ್ರೆಸ್‌ನಲ್ಲಿ ವ್ಯವಸ್ಥೆ ಬದಲಾವಣೆಗೆ ಹರಸಾಹಸ ಪಡುತ್ತಿದ್ದರೂ ಹೈಕಮಾಂಡ್ ಯಾವುದಕ್ಕೂ ಕಿವಿಗೊಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ನವರು ಬಿಜೆಪಿಯನ್ನು ಗೆಲ್ಲಲು ಬಯಸುತ್ತಾರೆ ಎಂದು ಕೆಲವೊಮ್ಮೆ ನನಗೆ ಅನಿಸುತ್ತದೆ ಎಂದು ಆಜಾದ್ ತಿಳಿಸಿದ್ದಾರೆ.

ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಅವರು ಪರಿಹರಿಸುವ ದೊಡ್ಡ ಸಮಸ್ಯೆ ಬಡತನ, ನಿರುದ್ಯೋಗ ಮತ್ತು ಹಣದುಬ್ಬರ ವನ್ನು ಕಡಿಮೆ ಮಾಡುವುದಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಯು ಧರ್ಮದ ಮೇಲೆ ಅಲ್ಲ, ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಆಜಾದ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ ಬೆಳವಣಿಗೆಗಳನ್ನು ಜನರು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಉಧಂಪುರದಲ್ಲಿ ಏಪ್ರಿಲ್ 19 ರಂದು, ಜಮ್ಮುವಿನಲ್ಲಿ ಏಪ್ರಿಲ್ 26 ರಂದು, ಅನಂತನಾಗ್-ರಜೌರಿಯಲ್ಲಿ ಮೇ 7 ರಂದು, ಶ್ರೀನಗರದಲ್ಲಿ ಮೇ 13 ರಂದು ಮತ್ತು ಮೇ 20 ರಂದು ಬಾರಾಮುಲ್ಲಾದಲ್ಲಿ ಮತದಾನ ನಡೆಯಲಿದೆ.

Leave a Reply

Your email address will not be published. Required fields are marked *