Sunday, 11th May 2025

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ: ಆಜಾದ್’ಗೆ ಸಾರಥ್ಯ

#GhulamNabiAzad

ಶ್ರೀನಗರ: ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಯಲ್ಲಿ ಪಕ್ಷ ಮುನ್ನಡೆಸಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಹಿರಿಯ ನಾಯಕಿ ಅಂಬಿಕಾ ಸೋನಿ ಮತ್ತು ಆಜಾದ್‌ ಅವರನ್ನು ಒಳಗೊಂಡ ಉನ್ನತ ನಾಯಕರು ಈ ಸಂಬಂಧ ಜಮ್ಮು ಮತ್ತು ಕಾಶ್ಮೀರದ ನಾಯಕರೊಂದಿಗೆ ಎರಡು ದಿನಗಳ ಚಿಂತನ, ಮಂಥನ ಸಭೆ ನಡೆಸಿದರು.

ಸಭೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪ್ರತಿನಿಧಿಯಾಗಿ ಭಾಗವಹಿಸಿದ್ದ ಕೆ.ಸಿ. ವೇಣುಗೋಪಾಲ್‌ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷ ಒಗ್ಗೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ನಿಜವಾಗಿಯೂ ಉತ್ತಮ ಫಲಿ ತಾಂಶ ಪಡೆಯಬೇಕಾದರೆ, ಎಲ್ಲ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಒಗ್ಗಟ್ಟಿನಿಂದ ಪೂರ್ಣ ಸಾಮರ್ಥ್ಯದೊಂದಿಗೆ ಚುನಾವಣೆ ಎದುರಿಸಬೇಕು’ ಎಂದು ತಿಳಿಸಿದರು.

ಏಳು ವರ್ಷ ಪಕ್ಷದ ಸಾರಥ್ಯ ವಹಿಸಿದ್ದ ಅಧ್ಯಕ್ಷ ಗುಲಾಮ್‌ ಅಹ್ಮದ್‌ ಮಿರ್‌ ಅವರು ಜು.6ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಖಾರ್‌ ರಸೂಲ್‌ ಅಥವಾ ರೇಮನ್‌ ಭಲ್ಲಾ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಬಹುದು. ಆದಾಗ್ಯೂ, ಚುನಾವಣೆಯಲ್ಲಿ ಆಜಾದ್‌ ಅವರೇ ಪಕ್ಷವನ್ನು ಮುನ್ನಡೆಸಲಿದ್ದಾರೆ.