Monday, 12th May 2025

ಗುಲಾಂ ನಬಿ ಆಝಾದ್ ಅವರ ಹೊಸ ರಾಜಕೀಯ ಪಕ್ಷ ಶೀಘ್ರದಲ್ಲಿ

#GhulamNabiAzad

ಶ್ರೀನಗರ: ಪಕ್ಷಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಆಝಾದ್ ಮುಂದಿನ 20 ದಿನಗಳ ಒಳಗೆ ಹೊಸ ರಾಷ್ಟ್ರೀಯ ರಾಜಕೀಯ ಪಕ್ಷ ಹುಟ್ಟುಹಾಕಲಿದ್ದಾರೆ.

ಮುಂಬರುವ ಜಮ್ಮು- ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಆಝಾದ್ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಅವರ ಆಪ್ತ  ಜಿ.ಎಂ.ಸರೂರಿ ಸ್ಪಷ್ಟಪಡಿಸಿದ್ದಾರೆ.

ಆಝಾದ್ ಕಳೆದ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಸರೂರಿ ಹಾಗೂ ಹಲವು ಮಂದಿ ಕಾಂಗ್ರೆಸ್ ಮುಖಂಡರು ಕೂಡಾ ಆಝಾದ್ ಅವರನ್ನು ಬೆಂಬಲಿಸಿ ರಾಜೀನಾಮೆ ನೀಡಿದ್ದರು. ಹೊಸ ಪಕ್ಷ ಜಾತ್ಯತೀತ ಪಕ್ಷವಾಗಿರುತ್ತದೆ ಎಂದು ಸರೂರಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಹೊಸ ಪಕ್ಷದ ಸಿಎಂ ಮುಖವಾಗಿ ಅವರನ್ನು ಬಿಂಬಿಸಲಾಗುತ್ತದೆ ಹಾಗೂ ಆಝಾದ್ ಮುಂದಿನ 20 ದಿನಗಳಲ್ಲಿ ಹೊಸ ಪಕ್ಷ ಆರಂಭಿಸಲಿದ್ದಾರೆ ಎಂದು ವಿವರಿಸಿದರು.