Monday, 12th May 2025

ಉನ್ನಾವೋ: ಬಿಗಿ ಭದ್ರತೆಯಲ್ಲಿ ಮೃತ ಹುಡುಗಿಯರ ಅಂತ್ಯಕ್ರಿಯೆ

ಉನ್ನಾವೊ: ದನಗಳಿಗೆ ಮೇವು ತರಲು ಅರಣ್ಯಕ್ಕೆ ಹೋಗಿದ್ದ ಹದಿಹರೆಯದ ಹುಡುಗಿಯರಲ್ಲಿ ಇಬ್ಬರು ಅಶೋಹಾ ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುರಾಹ ಗ್ರಾಮದ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು.

ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಕುಟುಂಬದವರಿಗೆ ಸೇರಿದ ಜಮೀನಿನಲ್ಲಿ ಮೃತ ಕೋಮಲ್ (15) ಮತ್ತು ಕಾಜಲ್ (14) ಅವರ ಶವಗಳನ್ನು ಸಮಾಧಿ ಮಾಡಲಾಯಿತು. ಅಸ್ವಸ್ಥಳಾಗಿದ್ದ ಹುಡುಗಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಗ್ರಾಮದ ಸಮೀಪದ ಜಮೀನಿನಲ್ಲಿ ಇಬ್ಬರು ಹುಡುಗಿಯರು ಶವವಾಗಿ ಪತ್ತೆಯಾದರೆ, ಒಬ್ಬ ಹುಡುಗಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *