Monday, 12th May 2025

ಪೆಟ್ರೋಲ್‌, ಡೀಸೆಲ್ ದರದಲ್ಲಿಲ್ಲ ಏರಿಳಿತ

#Petrol #Diesel

ನವದೆಹಲಿ: ರಷ್ಯಾ- ಉಕ್ರೇನ್ ಯುದ್ಧದ ಹಿನ್ನೆಲೆ ಏರಿಕೆ ಕಂಡಿದ್ದ ಜಾಗತಿಕ ಕಚ್ಚಾತೈಲ ಬೆಲೆ ಕೆಲವು ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ.

ದೇಶದ ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ದೇಶದ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರ ಪರಿಷ್ಕರಣೆಯನ್ನು ಸ್ಥಗಿತ ಮಾಡಿದ್ದವು.

ದೇಶದಲ್ಲಿ ಪ್ರತಿದಿನ ಇಂಧನ ದರ ಪರಿಷ್ಕರಣೆ ಮಾಡಲು ಆರಂಭ ಮಾಡಿದ್ದ ಸರ್ಕಾರಿ ತೈಲ ಕಂಪನಿಗಳು ಕಳೆದ ಮೂರು ವಾರದಿಂದಲೂ ಯಥಾಸ್ಥಿತಿ ಕಾಯ್ದುಕೊಂಡಿವೆ.

ದೇಶದಲ್ಲಿ ಕಳೆದ ಒಂದು ತಿಂಗಳಿನಲ್ಲಿ 15 ಬಾರಿ ಇಂಧನ ದರವನ್ನು ಏರಿಕೆ ಮಾಡಲಾ ಗಿದೆ. ಆದರೆ ಶನಿವಾರ ಪೆಟ್ರೋಲ್‌, ಡೀಸೆಲ್ ದರದಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಕಳೆದ ಇಪ್ಪತ್ತು ದಿನಗಳಿಂದ ಇಂಧನ ದರ ಸ್ಥಿರವಾಗಿದೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಏಳು ವರ್ಷಗಳ ಬಳಿಕ ಗರಿಷ್ಠ ಮಟ್ಟದ ಲ್ಲಿದೆ. ಕಳೆದ ಹತ್ತು ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್ ಬೆಲೆಯು ಏರಿಕೆ ಕಂಡಿದೆ. ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಇಂಧನ ದರ ಕಡಿಮೆಯಾಗುವ ಸಾಧ್ಯತೆ ಇದೆ.