Sunday, 25th May 2025

Food Poisoning: ರಸ್ತೆ ಬದಿಯಲ್ಲಿ ಮೊಮೊಸ್‌ ಸೇವಿಸಿ ಮಹಿಳೆ ಸಾವು; 15ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ

momos

ಹೈದರಾಬಾದ್‌: ರಸ್ತೆ ಬದಿಯ ಅಂಗಡಿಯಿಂದ ಮೊಮೊಸ್(Momos) ಸೇವಿಸಿ ಮಹಿಳೆಯೊಬ್ಬಳು ಮೃತಪಟ್ಟಿದ್ದು(Food Poisoning), ಹದಿನೈದು ಜನರು ಅಸ್ವಸ್ಥಗೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ವರದಿಯಾಗಿದೆ. ನಗರದ ಪ್ರತ್ಯೇಕ ಸ್ಥಳದಲ್ಲಿ ಈ ಘಟನೆ ವರದಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ವಾರ ಬಂಜಾರಾ ಹಿಲ್ಸ್ ಪೊಲೀಸ್ ವ್ಯಾಪ್ತಿಯ ವಿವಿಧ ಸ್ಟಾಲ್‌ಗಳಲ್ಲಿ ಅನೇಕರು ಮೊಮೊಸ್‌ ಸೇವಿಸಿದ್ದರು ಎನ್ನಲಾಗಿದೆ(Viral News).

ಪೊಲೀಸರ ಪ್ರಕಾರ, ಮಹಿಳೆ ಮತ್ತು ಇತರರು ‘ದೆಹಲಿ ಮೊಮೊಸ್’ ಹೆಸರಿನ ಫುಡ್ ಸ್ಟಾಲ್‌ನಿಂದ ಮೊಮೊಸ್ ಸೇವಿಸಿದ್ದಾರೆ. ಚಿಂತಲ್ ಬಸ್ತಿಯಲ್ಲಿರುವ ಈ ಸ್ಟಾಲ್ ಅನ್ನು ಮೂರು ತಿಂಗಳ ಹಿಂದೆ ಬಿಹಾರದಿಂದ ಬಂದ ಆರು ಜನರು ಸ್ಥಾಪಿಸಿದ್ದರು. ಸ್ಟಾಲ್ ನಡೆಸುತ್ತಿದ್ದವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಮೊಸ್ ತಿಂದು ಸಾವನ್ನಪ್ಪಿದ ಮಹಿಳೆಯ ಕುಟುಂಬದ ಸದಸ್ಯರು, ತಿಂಡಿ ತಿಂದ ಮಹಿಳೆ ಅಸ್ವಸ್ಥಗೊಂಡಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳೀಯರೊಬ್ಬರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಿಂಡಿ ಸೇವಿಸಿದ ಒಂದು ಗಂಟೆಯ ನಂತರ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ನಿನ್ನೆ ಬೆಳಗ್ಗೆ 8.30ರ ಸುಮಾರಿಗೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಮಾರಾಟಗಾರರ ಕಾರ್ಯಾಚರಣೆಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಆಹಾರ ಸುರಕ್ಷತಾ ಅಧಿಕಾರಿಗಳು, ಪೊಲೀಸರ ಸಹಯೋಗದಲ್ಲಿ ಸ್ಟಾಲ್ ಅನ್ನು ಪತ್ತೆಹಚ್ಚಿದರು ಮತ್ತು ಇದು ಮಾನ್ಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.

ಅವರು ಮೊಮೊಸ್‌ ಸ್ಟಾಲ್‌ಗಳಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಎಲ್ಲಾ ವ್ಯಾಪಾರ ಚಟುವಟಿಕೆಗಳನ್ನು ನಿಲ್ಲಿಸಲು ಮಾರಾಟಗಾರರಿಗೆ ಆದೇಶಿಸಿದರು. ಮಹಿಳೆಯ ಸಾವಿಗೆ ಕಾರಣ ಮತ್ತು ಇತರ ವ್ಯಕ್ತಿಗಳಿಗೆ ಬಾಧಿಸುವ ಕಾಯಿಲೆಗಳನ್ನು ನಿರ್ಧರಿಸಲು ಈ ವಿಷಯದ ಬಗ್ಗೆ ಕೂಲಂಕುಷ ತನಿಖೆ ನಡೆಸುವಂತೆ GHMC ಬಂಜಾರಾ ಹಿಲ್ಸ್ ಪೊಲೀಸರಿಗೆ ಮನವಿ ಮಾಡಿದೆ. ವಿಶೇಷವಾಗಿ ಪರವಾನಗಿ ಪಡೆಯದ ಮಾರಾಟಗಾರರಿಂದ ಬೀದಿ ಬದಿಯ ಆಹಾರವನ್ನು ಸೇವಿಸುವಾಗ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Bachchan Family: 25 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಮತ್ತು ಅಭಿಷೇಕ್‌ ಬಚ್ಚನ್‌