Sunday, 11th May 2025

ಮದುವೆ ಊಟ ಸೇವಿಸಿ 20 ಮಂದಿ ಅಸ್ವಸ್ಥ

ಧಾರ್: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಊಟ ಮಾಡಿದ ನಂತರ ಹಲವಾರು ಜನರು ಅಸ್ವಸ್ಥಗೊಂಡಿದ್ದು, ಅವರಲ್ಲಿ ಕನಿಷ್ಠ 20 ಮಂದಿ ಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಧಾರ್ನ ಧಮ್ನೋಡ್ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಆಹಾರ ಸೇವಿಸಿದ ನಂತರ ಹಲವರು ವಾಂತಿ ಮಾಡಿ ಕೊಂಡಿದ್ದಾರೆ ಎಂದು ಬ್ಲಾಕ್ ವೈದ್ಯಾಧಿಕಾರಿ ಬ್ರಹ್ಮರಾಜ್ ಕೌಶಲ್ ಹೇಳಿದ್ದಾರೆ. ಅಸ್ವಸ್ಥರಲ್ಲಿ 20 ಜನರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಇತರರನ್ನು ಪ್ರಾಥಮಿಕ ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ. ಇದು ವಿಷಾಹಾರ ಸೇವನೆಯ ಪ್ರರಪಣವಾಹಿಗೆ ಎಂದರು.
ಸದ್ಯ ಎಲ್ಲರೂ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೌಶಲ್ ತಿಳಿಸಿದ್ದಾರೆ.