Tuesday, 13th May 2025

ದಟ್ಟವಾದ ಮಂಜು: 29 ರೈಲುಗಳ ಸಂಚಾರ ವಿಳಂಬ

ನವದೆಹಲಿ: ದೆಹಲಿ ಹಾಗೂ ಉತ್ತರ ಭಾರತದ ಇತರ ಭಾಗಗಳಲ್ಲಿ ದಟ್ಟವಾದ ಮಂಜಿನ ಸ್ಥಿತಿಯಿಂದಾಗಿ ಉಂಟಾದ ಕನಿಷ್ಠ ಗೋಚರತೆ ಪರಿಣಾಮ ಕನಿಷ್ಠ 29 ರೈಲುಗಳ ಸಂಚಾರ ವಿಳಂಬವಾಗಿದ್ದು, ವಿಮಾನ ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಸತತ ಐದನೇ ದಿನವೂ ರಾಜಧಾನಿಯಲ್ಲಿ ಶೀತಗಾಳಿಯ ಪರಿಸ್ಥಿತಿ ಮುಂದುವರಿದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಗೋಚರತೆ ಪ್ರಮಾಣವು 200 ಮೀಟರ್‌ಗೆ ಇಳಿದಿತ್ತು. ಮಂಜಿನ ಹೊದಿಕೆಯಿಂದಾಗಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು ಮತ್ತು ಅಪಾಯದ ದೀಪ ಗಳು ಕಂಡುಬಂದವು. ಬೆಳಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಜಿನಿಂದಾಗುವ ಅಪಾಯದ ಕುರಿತು ಎಚ್ಚರಿಕೆಯನ್ನು ನೀಡಿದರು. ಹಲವು ವಿಮಾನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ತಿಳಿದುಬಂದಿದೆ.

ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಕನಿಷ್ಠ ತಾಪಮಾನ 3.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Read E-Paper click here