Wednesday, 14th May 2025

ಸಂಸತ್ ಆವರಣದೊಳಗೆ ಅಗ್ನಿ ಅವಘಡ

#parliament

ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭ ದಲ್ಲಿಯೇ ಸಂಸತ್ ಆವರಣದೊಳಗೆ ಬುಧವಾರ ಬೆಂಕಿ ಕಾಣಿಸಿಕೊಂಡಿದೆ.

ಸಂಸತ್ ಭವನದ 59ನೇ ಕೊಠಡಿಯಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದಾಗಿ ಕೊಠಡಿ ಹೊತ್ತಿ ಉರಿಯುತ್ತಿದೆ. ದೆಹಲಿಯ ಸಂಸತ್ ಭವನದ ಕೊಠಡಿ ಸಂಖ್ಯೆ 59ರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಮತ್ತೊಂದೆಡೆ ಸಂಸತ್ತಿನ ಚಳಿಗಾಲದ ಅಧಿವೇಶನ ಕಳೆದ ಸೋಮವಾರ ಪ್ರಾರಂಭ ವಾಯಿತು ಮತ್ತು ಡಿ.23ರಂದು ಮುಕ್ತಾಯ ಗೊಳ್ಳುವ ಸಾಧ್ಯತೆಯಿದೆ.