Thursday, 15th May 2025

Consumer Court : ಇದು ಚಿಲ್ಲರೆ ಮಾತಲ್ಲ, 50 ಪೈಸೆ ವಾಪಸ್ ಕೊಡದ ಅಂಚೆ ಕಚೇರಿಗೆ 15,000 ರೂ. ದಂಡ

Fine For Post office

ಚೆನ್ನೈ: ಎಷ್ಟೋ ಬಾರಿ ಚಿಲ್ಲರೆ ಇಲ್ಲವೆಂದು ಕೆಲವರು ಒಂದರಿಂದ ಐದು ರೂಪಾಯಿವರೆಗೆ ಹಿಂದಿರುಗಿಸುವುದೇ ಇಲ್ಲ. ಕೇಳಿ ಜಗಳ ಮಾಡಿಕೊಳ್ಳುವುದಕ್ಕಿಂತ ಸುಮ್ಮನಿರುವುದು ವಾಸಿ ಎಂದುಕೊಂಡು ಬರುತ್ತೇವೆ. ಆದರೆ ಪ್ರತಿಯೊಂದು ಪೈಸೆಗೂ (Fine For Post office) ಬೆಲೆ ಇದೆ ಎಂಬುದನ್ನು (Consumer Court) ಈಗ ಚೆನ್ನೈ ಜಿಲ್ಲಾ ಗ್ರಾಹಕ ವೇದಿಕೆ (Chennai District Consumer Forum) ನೀಡಿರುವ ತೀರ್ಪು ತೋರಿಸಿಕೊಟ್ಟಿದೆ.

50 ಪೈಸೆಯಿಂದ ಏನಾಗುತ್ತದೆ ಎಂದುಕೊಳ್ಳುವವರಿಗೆ ಸಾಕ್ಷಿ ಈ ತೀರ್ಪು. ಅಂಚೆ ಕಚೇರಿಯೊಂದು ಗ್ರಾಹಕನಿಗೆ 50 ಪೈಸೆ ಹಿಂದಿರುಗಿಸದ ಕಾರಣ ಬರೋಬ್ಬರಿ 15,000 ರೂ. ದಂಡವನ್ನು ವಿಧಿಸಲಾಗಿದೆ. ಕಳೆದ ಡಿಸೆಂಬರ್ 3 ರಂದು ಗೇರುಗಂಬಾಕ್ಕಂನ ಮಾನ್ಶ ಎಂಬವರು ಪತ್ರ ಕಳುಹಿಸುವ ಸಲುವಾಗಿ ಪೋಲಿಚಲೂರ್ ಅಂಚೆ ಕಚೇರಿಗೆ ಬಂದಿದ್ದಾರೆ. ಅಲ್ಲಿ ಅಂಚೆ ಶುಲ್ಕ 29.50 ರೂ. ಆಗಿತ್ತು. 30 ರೂ. ಕೊಟ್ಟ ಮಾನ್ಶ ಅವರಿಗೆ ಅಂಚೆ ಕಚೇರಿಯ ಗುಮಾಸ್ತರು 50 ಪೈಸೆಯನ್ನು ಹಿಂದಿರುಗಿಸಲಿಲ್ಲ. ಪರಿಣಾಮ ವಾದ ವಿವಾದ ಪ್ರಾರಂಭವಾಗಿದೆ.

ಬಾಕಿ ಹಣ ನೀಡಲು ಒತ್ತಾಯಿಸಿದಾಗ ಅಂಚೆಯಲಿರುವ ಸ್ವಯಂಚಾಲಿತ ವ್ಯವಸ್ಥೆಯು 30 ರೂ. ಅನ್ನು ಸ್ವೀಕರಿಸಿದೆ. ಇದಕ್ಕೆ ತಾಂತ್ರಿಕ ಸಮಸ್ಯೆ ಕಾರಣ ಎಂದು ಹೇಳಿ 50 ಪೈಸೆಯನ್ನು ಹಿಂದಿರುಗಿಸಲು ನಿರಾಕರಿಸಿದರು. ಯುಪಿಐ ಮೂಲಕ ನಿಖರ ಮೊತ್ತವನ್ನು ಪಾವತಿಸುವುದಾಗಿ ಮಾನ್ಶ ಹೇಳಿದರೂ ಅಂಚೆ ಕಚೇರಿ ಸಿಬ್ಬಂದಿ ಅದನ್ನು ನಿರಾಕರಿಸಿದರು.

ಬಳಿಕ ಈ ಕುರಿತು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ನೀಡಿದ ಮಾನ್ಶ ಅವರ ವಾದವನ್ನು ಆಲಿಸಿತ್ತು. ಇದಕ್ಕೆ ಪ್ರತಿಯಾಗಿ ಅಂಚೆ ಕಚೇರಿಯು, 50 ಪೈಸೆಗಿಂತ ಕಡಿಮೆ ಮೊತ್ತವನ್ನು ಹತ್ತಿರದ ರೂಪಾಯಿಗೆ ಪೂರ್ಣಗೊಳಿಸಲು ಸಾಫ್ಟ್‌ವೇರ್ ಅನ್ನು ಪ್ರೋಗ್ರಾಮ್ ಮಾಡಲಾಗಿದೆ. ಹೀಗಾಗಿ ಚಿಲ್ಲರೆ ವಾಪಾಸ್ ನೀಡಿಲ್ಲ ಎಂದು ವಾದಿಸಿದೆ.

ಯುಪಿಐ ಮೂಲಕ ಪಾವತಿಸಲು ಅವಕಾಶ ನೀಡದೇ ಇರುವುದಕ್ಕೆ ನವೆಂಬರ್ 2023 ರಿಂದ ಡಿಜಿಟಲ್ ಪಾವತಿ ಮೋಡ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, 2024ರ ಮೇ ತಿಂಗಳಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ತಿಳಿಸಿದೆ.

Carbon Credit: ಎಂಟು ರಾಜ್ಯಗಳ ರೈತರಿಗೆ ಸಿಗಲಿದೆ ಕಾರ್ಬನ್ ಕ್ರೆಡಿಟ್; ಏನಿದು ಕೇಂದ್ರ ಸರ್ಕಾರದ ಯೋಜನೆ?

ಎರಡೂ ಕಡೆಯ ವಾದವನ್ನು ಆಲಿಸಿದ ಆಯೋಗವು ಸಾಫ್ಟ್‌ವೇರ್ ದೋಷದಿಂದಾಗಿ ಅಂಚೆ ಕಚೇರಿಯು ಹೆಚ್ಚಿನ ಶುಲ್ಕ ವಿಧಿಸಿರುವುದನ್ನು ಒಪ್ಪಿಕೊಂಡಿದೆ. ಇದು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಸೆಕ್ಷನ್ 2(47) ರ ಅಡಿಯಲ್ಲಿ ಅಪರಾಧವಾಗಿದೆ ಎಂದು ಹೇಳಿ ಅಂಚೆ ಕಚೇರಿಗೆ 15,000 ರೂ. ದಂಡ ವಿಧಿಸಿ ಆದೇಶಿಸಿದೆ.