Wednesday, 14th May 2025

ಆಯಪ್​ ಮೂಲಕ ನಕಲಿ ಷೇರು ಮಾರುಕಟ್ಟೆ ವ್ಯವಹಾರ: ಆರೋಪಿ ಬಂಧನ

ಮುಂಬೈ, ಮಹಾರಾಷ್ಟ್ರ: ಯಪ್​ ಮೂಲಕ ನಕಲಿ ಷೇರು ಮಾರುಕಟ್ಟೆ ನಡೆಸುತ್ತಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಆರೋಪಿಯನ್ನು ಮುಂಬೈ ಕ್ರೈಂ ಬ್ರಾಂಚ್​ ಬಂಧಿಸಿದೆ.

ಆರೋಪಿಯನ್ನು ಜತಿನ್ ಸುರೇಶ್ ಭಾಯಿ ಮೆಹ್ತಾ (45) ಎಂದು ಗುರುತಿಸಲಾಗಿದೆ. ಸಂಕಡೆ ಬಿಲ್ಡಿಂಗ್ ಮಹಾವೀರ ನಗರದ ಕಾಂದಿವಲಿ ಪಶ್ಚಿಮದಲ್ಲಿ ವಾಸಿಸುತ್ತಿದ್ದ ಆರೋಪಿ ಜತಿನ್​ನಿಂದ 5 ಮೊಬೈಲ್ ಫೋನ್, 2 ಟ್ಯಾಬ್ಲೆಟ್, 1 ಲ್ಯಾಪ್ ಟಾಪ್, 1 ಪೇಪರ್ ಶ್ರೆಡರ್, 50 ಸಾವಿರ ನಗದು, 1 ರೂಟರ್, 1 ಪೆನ್ ಡ್ರೈವ್ ಸೇರಿದಂತೆ ಇತರ ವಸ್ತಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಾ.2023 ರಿಂದ ಜೂನ್ 20, 2023 ರವರೆಗೆ ಈ ನಕಲಿ ಷೇರು ಮಾರುಕಟ್ಟೆ ಮೂಲಕ 4,672 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದರಲ್ಲಿ ಭದ್ರತಾ ವಹಿವಾಟು ತೆರಿಗೆ, ಬಂಡವಾಳ ಗಳಿಕೆ ತೆರಿಗೆ, ರಾಜ್ಯ ಸರ್ಕಾರದ ಮುದ್ರಾಂಕ ತೆರಿಗೆ, ಸೆಬಿ ವಹಿವಾಟು ತೆರಿಗೆ, ಷೇರುಪೇಟೆ ವಹಿವಾಟಿನ ಆದಾಯ 1 ಕೋಟಿ 95 ಲಕ್ಷದ 64 ಸಾವಿರದ 888 ರೂಪಾಯಿ ವಂಚನೆಯಾಗಿ ರುವುದು ತಿಳಿದುಬಂದಿದೆ.

ಜೂ.20ರಂದು ಮುಂಬೈ ಸೆಲ್​ನ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ವಿನಾಯಕ ಚವ್ಹಾಣ್ ಅವರಿಗೆ ಮಾಹಿತಿ ತಿಳಿದು ಬಂದಿತ್ತು. ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಮೂಡೀಸ್ ಅಪ್ಲಿಕೇಶನ್ ಮೂಲಕ ಅಕ್ರಮವಾಗಿ ವ್ಯಾಪಾರ ನಡೆಯುತ್ತಿರುವುದರ ಬಗ್ಗೆ ಪತ್ತೆ ಮಾಡಿದ್ದರು.

ಆರೋಪಿಗಳು ಭದ್ರತಾ ವಹಿವಾಟು ತೆರಿಗೆ, ಬಂಡವಾಳ ಗಳಿಕೆ ತೆರಿಗೆ, ರಾಜ್ಯ ಸರ್ಕಾರದ ಮುದ್ರಾಂಕ ಶುಲ್ಕ, ಸೆಬಿ ವಹಿವಾಟು ಶುಲ್ಕ, ಷೇರುಪೇಟೆ ವಹಿವಾಟಿನ ಆದಾಯ ಸೇರಿದಂತೆ ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ವಂಚಿಸಿರುವುದು ಪತ್ತೆಯಾಗಿದೆ.

ಆರೋಪಿಗಳ ಲ್ಯಾಪ್ ಟಾಪ್ ಪರಿಶೀಲನೆ ನಡೆಸಲಾಗಿದ್ದು, ಅದರಲ್ಲಿ ಅಕ್ರಮ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡುಬಂದಿದೆ.

Leave a Reply

Your email address will not be published. Required fields are marked *