Sunday, 11th May 2025

ನಕಲಿ ನೋಟು ವಿನಮಯಕ್ಕೆ ಯತ್ನಿಸಿದರೆ ಕಾನೂನು ಕ್ರಮ

ವದೆಹಲಿ: ಅಮಾನ್ಯಗೊಂಡ 2,000 ರೂ.ಗಳ ನೋಟುಗಳ ವಿನಿಮಯ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಲಿದೆ.

2016 ರ ಅಪನಗದೀಕರಣದ ನಂತರ ಪಾಠ ಕಲಿತಿರುವ ಆರ್ಬಿಐ, ಬ್ಯಾಂಕುಗಳ ಹೊರಗೆ ಸರತಿ ಸಾಲುಗಳು ದೊಡ್ಡದಾಗದಂತೆ ನೋಡಿಕೊಳ್ಳುವಂತೆ ಬ್ಯಾಂಕುಗಳಿಗೆ ಸ್ಪಷ್ಟಪಡಿ ಸಿದೆ.

ಯಾರೂ ನಕಲಿ ನೋಟುಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡದಂತೆ ಬ್ಯಾಂಕುಗಳು ಸಿದ್ಧತೆ ಗಳನ್ನು ಮಾಡಿವೆ. ಇದಕ್ಕಾಗಿ, ನೋಟು ಗಳನ್ನು ಪರಿಶೀಲಿಸುವ ಸಂಪೂರ್ಣ ಪ್ರಕ್ರಿಯೆ ಯನ್ನು ನಿಗದಿಪಡಿಸಲಾಗಿದೆ. ಯಾವುದೇ ನಕಲಿ ನೋಟು ಬ್ಯಾಂಕಿನಲ್ಲಿ ಸಿಕ್ಕಿಬಿದ್ದರೆ, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಒಬ್ಬ ವ್ಯಕ್ತಿಯಿಂದ ಐದಕ್ಕಿಂತ ಹೆಚ್ಚು ನಕಲಿ ನೋಟುಗಳು ಕಂಡುಬಂದರೆ, ಈ ಸಂಬಂಧ ಎಫ್‌ಐಆರ್ ಸಹ ದಾಖಲಿಸಲಾಗುವುದು. ಇದರ ನಂತರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.