Wednesday, 14th May 2025

ಮಾಜಿ ಸಂಸದ ಈಶ್ವರಲಾಲ್​ ಶಂಕರಲಾಲ್​ ಜೈನ್ ಲಾಲ್ವಾನಿ ಆಸ್ತಿ ಜಪ್ತಿ

ನವದೆಹಲಿ: ಮಹಾರಾಷ್ಟ್ರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಈಶ್ವರಲಾಲ್​ ಶಂಕರಲಾಲ್​ ಜೈನ್ ಲಾಲ್ವಾನಿ ಮತ್ತು ಕುಟುಂಬ ಹಾಗೂ ಇವರ ವ್ಯಾಪಾರಕ್ಕೆ ಸೇರಿದ 315 ಕೋಟಿ ರೂಪಾಯಿ ಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

77 ವರ್ಷದ ಲಾಲ್ವಾನಿ ಅವರು ರಾಜಮಲ್​ ಲಖಿಚಂದ್​ ಜ್ಯುವೆಲರ್ಸ್ ಪ್ರೈವೇಟ್ ಲಿಮಿಟೆಡ್, ಆರ್​ಎಲ್​ ಗೋಲ್ಡ್​​ ಪ್ರೈವೇಟ್​ ಲಿಮಿಟೆಡ್ ಮತ್ತು ಮನರಾಜ್ ಜ್ಯುವೆಲ್ಲರ್ಸ್‌ನ ಪ್ರವರ್ತಕರಾಗಿದ್ದಾರೆ.

ಮಹಾರಾಷ್ಟ್ರದ ಜಲಗಾಂವ್, ಮುಂಬೈ, ಥಾಣೆ, ಸಿಲ್ಲೋಡ್​,ಗುಜರಾತ್​ನ ಕಚ್​ನಲ್ಲಿರುವ ಘಟಕ, ಬೆಳ್ಳಿ ಮತ್ತು ವಜ್ರ, ಚಿನ್ನಾಭರಣ ಹಾಗೂ ನಗದು ಸೇರಿದಂತೆ 70 ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಈಶ್ವರ ಲಾಲ್ ಜೈನ್ ಲಾಲ್ವಾನಿ, ಮನೀಶ್ ಈಶ್ವರಲಾಲ್ ಜೈನ್ ಲಾಲ್ವಾನಿ ಮತ್ತು ಇತರರು ಸಂಪಾದಿಸಿದ ಬೇನಾಮಿ ಆಸ್ತಿಗಳೂ ಸೇರಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಹಣಕಾಸಿನ ಮೌಲ್ಯ ಹೆಚ್ಚಿಸುವ ವಹಿವಾಟಿನಲ್ಲಿ ತೊಡಗಿದ್ದಾರೆ. ಕಂಪನಿಗಳ ಲೆಕ್ಕಪರಿಶೋಧಕರೊಂದಿಗೆ ಶಾಮೀಲಾಗಿ ರಿಯಲ್​ ಎಸ್ಟೇಟ್​​ ಆಸ್ತಿಗಳಲ್ಲಿನ ಹೂಡಿಕೆಗಾಗಿ ಸಾಲದ ಆದಾಯವನ್ನು ಬಳಕೆ ಮಾಡಿದ್ದಾರೆ. ಇದಕ್ಕಾಗಿ ಕಂಪನಿಗಳ ಖಾತೆಗಳ ಪುಸ್ತಕಗಳಲ್ಲಿ ನಕಲಿ ಮಾರಾಟ ಖರೀದಿ ವಹಿವಾಟು ಗಳನ್ನು ತೋರಿಸಿದ್ದಾರೆ ಎಂದು ಇಡಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಆಗಸ್ಟ್‌ನಲ್ಲಿ ದಾಳಿ ನಡೆಸಿತ್ತು.

Leave a Reply

Your email address will not be published. Required fields are marked *