Sunday, 11th May 2025

ಗುಂಡಿನ ಕಾಳಗ: ಮಹಿಳಾ ಮಾವೋವಾದಿ ಸಾವು

ಕಂಕೇರ್: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಮಹಿಳಾ ಮಾವೋವಾದಿಯೊಬ್ಬರು ಮೃತಪಟ್ಟಿದ್ದಾರೆ.

ಛೋಟೆಬೆಥಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿನಗುಂದ ಗ್ರಾಮದ ಬಳಿಯ ಅರಣ್ಯದಲ್ಲಿ ಬೆಳಗ್ಗೆ ಭದ್ರತಾ ಸಿಬ್ಬಂದಿ ಮಾವೋ ವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ಶ್ರೇಣಿ) ಸುಂದರರಾಜ್ ಪಿ ತಿಳಿಸಿದ್ದಾರೆ.

‘ರಾಜ್‌ನಂದಗಾಂವ್-ಕಂಕೇರ್ ಗಡಿ ವಿಭಾಗಕ್ಕೆ (ಆರ್‌ಕೆಬಿ) ಸೇರಿದ ನಕ್ಸಲೀಯ ನಾಯಕರು ಮತ್ತು 20 ರಿಂದ 25 ಸಶಸ್ತ್ರ ಪಡೆಗಳ ಉಪಸ್ಥಿತಿಯ ಕುರಿತು ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) 132 ನೇ ಬೆಟಾಲಿಯನ್ ಸಿಬ್ಬಂದಿ ) ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು’ ಎಂದು ಐಜಿ ಹೇಳಿದರು.

ಗುಂಡಿನ ಚಕಮಕಿ ನಿಂತ ನಂತರ, ‘ಸಮವಸ್ತ್ರ’ ಧರಿಸಿದ್ದ ಅಪರಿಚಿತ ಮಹಿಳಾ ಮಾವೋವಾದಿಯ ಶವವು 303 ರೈಫಲ್‌ನೊಂದಿಗೆ ಪತ್ತೆಯಾಗಿದೆ ಎಂದು ಹೇಳಿದರು.