Thursday, 22nd May 2025

Emergency Landing: ಮುಖ್ಯ ಚುನಾವಣಾಧಿಕಾರಿ ರಾಜೀವ್‌ ಕುಮಾರ್‌ ಇದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

Rajiv kumar

ನವದೆಹಲಿ: ಕಳೆದೆರಡು ದಿನಗಳಿಂದ ಬಾಂಬ್‌ ಬೆದರಿಕೆ ಕರೆ(Bomb threat)ಗಳು ಬರುತ್ತಿರುವ ಹಿನ್ನೆಲೆ ಕೆಲವು ವಿಮಾನಗಳನ್ನು ತುರ್ತು ಭೂಸ್ಪರ್ಷ, ಸಂಚಾರ ರದ್ದು ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಅನ್ನು ತುರ್ತು ಭೂಸ್ಪರ್ಶ(Emergency Landing) ಮಾಡಲಾಗಿದೆ. ರಾಜೀವ್‌ ಕುಮಾರ್‌(Rajiv Kumar) ಮತ್ತು ಉತ್ತರಾಖಂಡದ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ವಿಜಯ್ ಕುಮಾರ್ ಜೋಗ್ದಂಡ್ ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಬುಧವಾರ ಪಿಥೋರಗಢ ಜಿಲ್ಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ವರದಿಯಾಗಿದೆ.

ಜೋಗ್ದಂಡ್ ಅವರನ್ನು ಮುನ್ಸಿಯಾರಿಗೆ ರಾಜೀವ್‌ ಕುಮಾರ್‌ ತಮ್ಮ ಸಿಬ್ಬಂದಿ ಜತೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಅದೃಷ್ಟವಶಾತ್‌ ಯಾವುದೇ ಹಾನಿಯಾಗದೆ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಷ ಮಾಡಿದೆ. ಇನ್ನು ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾರು ಸುರಕ್ಷಿತವಾಗಿದ್ದಾರೆ. ಈ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಷಕ್ಕೆ ಕಾರಣ ಏನೆಂಬುದು ತಿಳಿದಿಲ್ಲ. ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಷ ಮಾಡಿರುವಂತೆ ಕಂಡು ಬಂದಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಡೆಲ್ಲಿ- ಬೆಂಗಳೂರು ಆಕಾಸ ಏರ್‌ ತುರ್ತು ಭೂಸ್ಪರ್ಶ

ದೆಹಲಿಯಿಂದ ಬೆಂಗಳೂರಿಗೆ 184 ಪ್ರಯಾಣಿಕರನ್ನು ಹೊತ್ತುಕೊಂಡು ಹಾರಾಡುತ್ತಿದ್ದ ಅಕಾಸ ಏರ್ ವಿಮಾನಕ್ಕೆ (Akasa Air ) ಬುಧವಾರ ಬಾಂಬ್ ಬೆದರಿಕೆ ಬಂದಿದೆ. ತಕ್ಷಣ ಹಾರಾಟವನ್ನು ಸ್ಥಗಿತಗೊಳಿಸಿ ವಿಮಾನವನ್ನು ಡೆಲ್ಲಿಯಲ್ಲಿಯೇ ತುರ್ತು ಭೂಸ್ಪರ್ಶ ಮಾಡಲಾಗಿದೆ.

ದೆಹಲಿಯಿಂದ ಬೆಂಗಳೂರಿಗೆ ಹಾರುತ್ತಿದ್ದ ಮತ್ತು 174 ಪ್ರಯಾಣಿಕರು, 3 ಮಕ್ಕಳು ಮತ್ತು 7 ಸಿಬ್ಬಂದಿಯನ್ನು ಹೊತ್ತ ಅಕಾಸಾ ಏರ್ ವಿಮಾನ (ಕ್ಯೂಪಿ 1335) ಸುರಕ್ಷತಾ ಎಚ್ಚರಿಕೆ ಪಡೆಯಿತು. ಅಕಾಸಾ ಏರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ. ಮುನ್ನೆಚ್ಚರಿಕೆಯೊಂದಿಗೆ ವಿಮಾನವನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲು ಪೈಲಟ್‌ಗೆ ಸಲಹೆ ನೀಡಲಾಯಿತು. ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಯಲು ಕ್ಯಾಪ್ಟನ್ ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸುತ್ತಿದ್ದಾರೆ” ಎಂದು ಅಕಾಸಾ ಏರ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ಒಂದೇ ದಿನ ನಾಲ್ಕು ವಿಮಾನಗಳಿಗೆ ಬಾಂಬ್‌ ಬೆದರಿಕೆ!

ದೆಹಲಿಯಿಂದ ಚಿಕಾಗೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು (Air India Express) ಬಾಂಬ್‌ ಬೆದರಿಕೆ (Bomb scare) ಬಂದ ಹಿನ್ನೆಲೆಯಲ್ಲಿ ಕೆನಡಾದ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ಅಕ್ಟೋಬರ್ 15, 2024ರಂದು ದೆಹಲಿಯಿಂದ ಚಿಕಾಗೊಗೆ ಕಾರ್ಯನಿರ್ವಹಿಸುತ್ತಿದ್ದ ವಿಮಾನ ಎಐ 127 ಆನ್‌ಲೈನ್‌ ಭದ್ರತಾ ಬೆದರಿಕೆಗೆ ಒಳಗಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಕೆನಡಾದ ಇಕಾಲುಯಿಟ್ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಏರ್ ಇಂಡಿಯಾ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ.

ನಿಗದಿಪಡಿಸಿದ ಭದ್ರತಾ ಪ್ರೋಟೋಕಾಲ್ ಪ್ರಕಾರ ವಿಮಾನ ಮತ್ತು ಪ್ರಯಾಣಿಕರನ್ನು ಮತ್ತೆ ಪರೀಕ್ಷಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪುನರಾರಂಭಿಸುವವರೆಗೆ ಅವರಿಗೆ ಸಹಾಯ ಮಾಡಲು ಏರ್ ಇಂಡಿಯಾ ವಿಮಾನ ನಿಲ್ದಾಣದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಏರ್‌ಲೈನ್‌ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Chopper Emergency Landing: ವಾಯುಪಡೆಯ ಹೆಲಿಕಾಪ್ಟರ್‌ ತುರ್ತು ಭೂರ್ಶ; ತಪ್ಪಿದ ಭಾರೀ ದುರಂತ