Sunday, 11th May 2025

ಚುನಾವಣಾ ಸಮಿತಿಗೆ ಕಾಂಗ್ರೆಸ್‌ನ 11 ಹೊಸ ನಾಯಕರ ಸೇರ್ಪಡೆ

ವದೆಹಲಿ: ಕರ್ನಾಟಕ ಪ್ರದೇಶ ಚುನಾವಣಾ ಸಮಿತಿಗೆ ಕಾಂಗ್ರೆಸ್‌ನ 11 ಹೊಸ ನಾಯಕರ ಹೆಸರನ್ನು ಸೋಮವಾರ ಪ್ರಕಟಿಸ ಲಾಗಿದ್ದು, ಮುಂದಿನ ವರ್ಷದ ಆರಂಭದಲ್ಲಿ ನಡೆಯ ಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದು ಕೊಳ್ಳುವ ಸರ್ವ ‍ಪ್ರಯತ್ನ ಆರಂಭವಾಗಿದೆ.

‘2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಪ್ರದೇಶ ಚುನಾ ವಣಾ ಸಮಿತಿಯಲ್ಲಿ ಹೆಚ್ಚುವರಿ ಹೆಸರು ಗಳನ್ನು ಸೇರಿಸುವುದಕ್ಕೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದಿಸಿದ್ದು, ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ’ ಎಂದು ಪಕ್ಷದ ಮೂಲ ತಿಳಿಸಿದೆ.

ಪ್ರದೇಶ ಚುನಾವಣಾ ಸಮಿತಿಯಲ್ಲಿ ಬಿ.ಎಲ್.ಶಂಕರ್, ಪರಮೇಶ್ವರ್ ನಾಯ್ಕ, ಉಮಾಶ್ರೀ, ರಮೇಶ್ ಕುಮಾರ್, ರಮಾನಾಥ್ ರೈ, ಎಚ್‌.ಎಂ.ರೇವಣ್ಣ, ಎಎಂ ಹಿಂಡಸಗೇರಿ ಹೆಸರು ಜತೆಗೆ ರಾಜ್ಯ ಕಾಂಗ್ರೆಸ್ ಮುಖಂಡರಾದ ಜಮೀರ್ ಅಹಮದ್, ಶಿವಾನಂದ ಪಾಟೀಲ, ಶರಣಬಸಪ್ಪಗೌಡ ದರ್ಶನಾಪುರ, ಶರಣಪ್ರಕಾಶ್‌ ಪಾಟೀಲ ಅವರನ್ನೂ ಸಮಿತಿಗೆ ಸೇರಿಸಲಾಗಿದೆ.
Read E-Paper click here