Monday, 12th May 2025

227ನೇ ಬಾರಿಗೆ ನಾಮಪತ್ರ ಸಲ್ಲಿಸಿದ ‘ಎಲೆಕ್ಷನ್ ಕಿಂಗ್’

ಕೊಯಮತ್ತೂರು : ‘ಎಲೆಕ್ಷನ್ ಕಿಂಗ್’ ಖ್ಯಾತ ಕೆ ಪದ್ಮರಾಜನ್ ಅವರು 227ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಫೆಬ್ರವರಿ 19 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಆರಂಭವಾದ ಬಳಿಕ ಸಲ್ಲಿಸಿದ ಸ್ಪರ್ಧಿಗಳಲ್ಲಿ ಪದ್ಮರಾಜನ್ ಮೊದಲಿಗರಾಗಿದ್ದಾರೆ. ಪದ್ಮರಾಜನ್ ಅವರು ಅತ್ಯಂತ ವಿಫಲ ಅಭ್ಯರ್ಥಿಯಾಗಿ ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆಡಿದ್ದಾರೆ.

ಟೈರ್ ವ್ಯವಹಾರದಲ್ಲಿ, ಪದ್ಮರಾಜನ್ ಮೊದಲು 1986 ರಲ್ಲಿ ಮೆಟ್ಟೂರಿನಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಬಳಿಕ ಅಟಲ್ ಬಿಹಾರಿ ವಾಜಪೇಯಿ (ಲಖನೌ), ಮನಮೋಹನ್ ಸಿಂಗ್, ಪಿವಿ ನರಸಿಂಹ ರಾವ್ (ನಂದ್ಯಾಲ್), ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್, ಕೆಆರ್ ನಾರಾಯಣನ್ ಮತ್ತು ಎಪಿಜೆ ಅಬ್ದುಲ್ ಕಲಾಂ ವಿರುದ್ಧವೂ ಸ್ಪರ್ಧಿಸಿದರು.

62 ವರ್ಷದ ಪದ್ಮರಾಜನ್ ಈಗ ವೆರಕಲ್ಪುದೂರ್ (ವಾರ್ಡ್-2) ನಿಂದ ಸ್ಪರ್ಧಿಸುತ್ತಿದ್ದಾರೆ.