Wednesday, 14th May 2025

ಸೆಪ್ಟೆಂಬರ್ 30ರೊಳಗೆ ಅಡ್ಮಿಷನ್, ಅಕ್ಟೋಬರ್ 1 ರಿಂದ ಶೈಕ್ಷಣಿಕ ವರ್ಷ ಆರಂಭ

ನವದೆಹಲಿ: ದೇಶಾದ್ಯಂತ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜ್ ಗಳಲ್ಲಿ ಸೆಪ್ಟೆಂಬರ್ 30ರೊಳಗೆ ಅಡ್ಮಿಷನ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ 1 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಹೊಸ ಮಾರ್ಗಸೂಚಿ ತಿಳಿಸಿದೆ.

ಸಿಬಿಎಸ್‌ಇ, ಐಸಿಎಸ್ ಇ ಮತ್ತು ಎಲ್ಲಾ ರಾಜ್ಯಗಳ ಬೋರ್ಡ್ ಗಳು ಫಲಿತಾಂಶ ಪ್ರಕಟಣೆ ನಂತರವಷ್ಟೇ ಪದವಿ ತರಗತಿಗಳ ದಾಖಲಾತಿ ಪ್ರಕ್ರಿಯೆ ಆರಂಭಿಸು ವಂತೆ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಸೂಚಿಸಿದೆ. ಬೋಧನೆ-ಕಲಿಕೆಯ ಪ್ರಕ್ರಿಯೆಯು ಆಫ್‌ಲೈನ್, ಆನ್‌ಲೈನ್ ಅಥವಾ ಸಂಯೋಜಿತ ಕ್ರಮದಲ್ಲಿ ಮುಂದುವರಿಯ ಬೇಕು ಎಂದು ಆಯೋಗ ಸ್ಪಷ್ಟಪಡಿಸಿದೆ. ತರಗತಿಗಳು, ವಿರಾಮಗಳು, ಪರೀಕ್ಷೆಗಳ ನಡವಳಿಕೆ, ಸೆಮಿಸ್ಟರ್ ವಿರಾಮ ಇತ್ಯಾದಿಗಳಿಗೆ ಸಂಸ್ಥೆಗಳು ಯೋಜನೆ ರೂಪಿಸಬಹುದಾಗಿದೆ.

ಅಕ್ಟೋಬರ್ 1 ರಿಂದ ಜುಲೈ 31 ರವರೆಗೆ ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕಾಲಕಾಲಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಅಗತ್ಯ ನಡವಳಿಗಳು ಮತ್ತು ಸಲಹೆಗಳನ್ನು ಪಾಲಿಸು ವಂತೆ ಹೇಳಲಾಗಿದೆ.

ಆಗಸ್ಟ್ 31 ರೊಳಗೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಅಂತಿಮ ವರ್ಷ ಅಥವಾ ಅಂತಿಮ ಅವಧಿಯ ಪರೀಕ್ಷೆಗಳನ್ನು ನಡೆಸುವುದು ಕಡ್ಡಾಯಗೊಳಿಸಲಾಗಿದೆ. ಆಫ್ ಲೈನ್ ಅಥವಾ ಅನ್ ಲೈನ್ ನಲ್ಲಿ ಪರೀಕ್ಷೆ ನಡೆಸಬಹುದಾಗಿದೆ.

Leave a Reply

Your email address will not be published. Required fields are marked *