Wednesday, 14th May 2025

ಪ.ಬಂಗಾಳದ ಎಂಟು ಪೊಲೀಸ್ ಅಧಿಕಾರಿಗಳಿಗೆ ಇ.ಡಿ ಸಮನ್ಸ್‌

ಕೋಲ್ಕತ್ತ: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪಶ್ಚಿಮ ಬಂಗಾಳದ ಎಂಟು ಪೊಲೀಸ್ ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ನೀಡಿದೆ.

ಐಪಿಎಸ್ ಅಧಿಕಾರಿಗಳಾದ ಜ್ಞಾನವಂತ್ ಸಿಂಗ್ (ಎಡಿಜಿ, ಸಿಐಡಿ), ಕೋಟೇಶ್ವರ ರಾವ್, ಎಸ್.ಸೆಲ್ವಮುರುಗನ್, ಶ್ಯಾಮ್ ಸಿಂಗ್, ರಾಜೀವ್ ಮಿಶ್ರಾ, ಸುಕೇಶ್ ಕುಮಾರ್ ಜೈನ್ ಮತ್ತು ತಥಾಗತ ಬಸು ಅವರಿಗೆ ಸಮನ್ಸ್‌ ನೀಡಲಾಗಿದೆ.

ದೆಹಲಿಯ ಕಚೇರಿಯಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗಲು ಐಪಿಎಸ್‌ ಅಧಿಕಾರಿಗಳಿಗೆ ನಿರ್ದಿಷ್ಟ ದಿನಾಂಕಗಳನ್ನು ನೀಡಲಾಗಿದೆ.

ಅಧಿಕಾರಿಗಳು ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಈ ಹಗರಣದಿಂದ ಅವರು ಲಾಭ ಪಡೆದಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ. ಕಳ್ಳಸಾಗಣೆ ನಡೆದ ಪ್ರದೇಶಗಳಲ್ಲಿ ಅವರೆಲ್ಲರನ್ನು ನಿಯೋಜಿಸಲಾಗಿತ್ತು’ ಎಂದು ಇಡಿ ಅಧಿಕಾರಿ ತಿಳಿಸಿದ್ದಾರೆ.

ಏಳು ಮಂದಿಗೆ ಕಳೆದ ವರ್ಷವೂ ಇಡಿ ಸಮನ್ಸ್ ನೀಡಿತ್ತು.