Tuesday, 13th May 2025

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೇರ್ಮನ್ ಕಚೇರಿ, ನಿವಾಸಕ್ಕೆ ಇಡಿ ದಾಳಿ

ತಿರುವನಂತಪುರಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಚೇರ್ಮನ್ ಓ.ಎಂ ಅಬ್ದುಲ್ ಸಲಾಂ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ನಸರುದ್ದೀನ್ ಎಲಾಮರಂ ಅವರ ಕೇರಳ ಕಚೇರಿ ಹಾಗೂ ನಿವಾಸದ ಮೇಲೆ ಜಾರಿ ನಿರ್ದೇಶನಾ ಲಯದ ಅಧಿಕಾರಿಗಳು ಗುರುವಾರ ಪರಿಶೀಲನೆ, ದಾಳಿ ನಡೆಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಪಿಎಫ್‌ಐ ಮುಖಂಡರ ಮನೆ ಹಾಗೂ ಕಚೇರಿ ಮೇಲೆ ಇಡಿ ದಾಳಿ ಮುಂದುವರೆಸಿದೆ. ಕೇರಳ, ಕರ್ನಾಟಕರ ಸೇರಿದಂತೆ 26 ಕಡೆ ಏಕ ಕಾಲದಲ್ಲಿ ದಾಳಿ ಮಾಡಲಾಗಿದ್ದು, ಪಿಎಫ್‌ಐ ಸಂಘ ಟನೆಗೆ ದೇಶ ವಿದೇಶದಿಂದ ಹಣ ಬಂದ ಹಿನ್ನಲೆಯನ್ನು ಪರಿಶೀಲಿಸಲಾಗುತ್ತಿದೆ.

ಕೇರಳದ ಮಲಪ್ಪುರಂ, ಎರ್ನಾಕುಲಂ ಹಾಗೂ ತಿರುವನಂತಪುರಂ ಜಿಲ್ಲೆಗಳ ವಿವಿಧೆಡೆ ದಾಳಿ ನಡೆದಿದೆ. ಮನಿಲಾಂಡ್ರಿಂಗ್ ಕಾಯ್ದೆ ಉಲ್ಲಂಘನೆ(ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬೆಂಗಳೂರು, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ,ಬಿಹಾರ, ಮಹಾರಾಷ್ಟ್ರ ರಾಜಸ್ಥಾನಗಳಲ್ಲಿ ಏಕಕಾಲಕ್ಕೆ ದಾಳಿ ಮುಂದುವರೆದಿದೆ. ವಿದೇಶದಿಂದ ಕೋಟಿ ಕೋಟಿ ಹಣ ಪಿಎಫ್‌ಐ ಸಂಘಟನೆಗೆ ಬಂದಿದ್ದುಮ, ಹಣದ ಮೂಲದ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಬ್ಯಾಂಕ್ ಖಾತೆಗಳ ವಿವರವನ್ನು ಇಡಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *