Thursday, 15th May 2025

ಕಿಷ್ತ್‌ವಾರ್‌ನಲ್ಲಿ 3.6 ತೀವ್ರತೆಯ ಭೂಕಂಪ

ಶ್ರೀನಗರ: ಮ್ಮು ಮತ್ತು ಕಾಶ್ಮೀರದಲ್ಲಿ ಕಿಷ್ತ್‌ವಾರ್‌ನಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.6 ದಾಖಲಾಗಿದೆ. ಭೂಮಿಯ ಒಳಭಾಗದಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರಬಿಂದು ದಾಖಲಾಗಿದೆ.

ಭೂಕಂಪದಿಂದ ಯಾವುದೇ  ಪ್ರಾಣಹಾನಿ ಆಗದ ಕಾರಣ ಅಲ್ಲಿನ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ 10 ದಿನಗಳಲ್ಲಿ ಇದು ಮೂರನೇ ಭೂಕಂಪವಾಗಿದೆ. ಜನವರಿ 1 ರಂದು ದೆಹಲಿಯಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ.

ಇದರ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಭೂಕಂಪ ಸಂಭವಿಸಿದೆ. ಮೇಲಾಗಿ ಈ ತಿಂಗಳ 5ರಂದು ಅಫ್ಘಾನಿ ಸ್ತಾನದಲ್ಲಿ ಶೇ.5.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು.