Monday, 12th May 2025

ಜಮ್ಮು-ಕಾಶ್ಮೀರದಲ್ಲಿ 4.9 ತೀವ್ರತೆಯ ಭೂಕಂಪ

ವದೆಹಲಿ: ದೆಹಲಿ ಮತ್ತು ನೆರೆಯ ನಗರಗಳಲ್ಲಿ ಭಾನುವಾರ ಲಘು ಭೂ ಕಂಪನ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಪಂಜಾಬ್ ಮತ್ತು ಹರಿಯಾಣದ ಹಲವೆಡೆ ಕಂಪನದ ಅನುಭವವಾಗಿದೆ.

ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನ-ತಜಕಿಸ್ತಾನ್ ಗಡಿ ಪ್ರದೇಶ ಎಂದು ಹೇಳಲಾಗಿದೆ. ಅಫ್ಘಾನಿಸ್ತಾನದ ಫೈಜಾ ಬಾದ್‌ನಿಂದ ಆಗ್ನೇಯಕ್ಕೆ 70 ಕಿಮೀ ದೂರದಲ್ಲಿ ಬೆಳಗ್ಗೆ 10.19ರ ಸುಮಾರಿಗೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಪೂಂಚ್‌ನಲ್ಲಿಯೂ ಕಂಪನದ ಅನುಭವವಾಗಿದೆ.

ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಫೈಜಾಬಾದ್‌ನ ಆಗ್ನೇಯಕ್ಕೆ 79 ಕಿಮೀ ದೂರದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ. ಭೂಕಂಪವು 11:19 AM IST ಕ್ಕೆ ಮೇಲ್ಮೈಯಿಂದ 220 ಕಿಮೀ ಆಳದಲ್ಲಿ ಸಂಭವಿಸಿದೆ.

ಲಘು ಭೂಕಂಪನದ ಅನುಭವವಾದ ನಂತರ ನೆಟಿಜನ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್‌ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು.