Wednesday, 14th May 2025

ಆರ್ಥಿಕ ಸಂಕಷ್ಟದಲ್ಲಿ ಡೊನ್ಜೊ: ಸೆಪ್ಟೆಂಬರ್‌ವರೆಗೆ ವೇತನ ಪಾವತಿ ಕಷ್ಟ..!

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಬೆಂಬಲಿತ ಸ್ಟಾರ್ಟ್‌ಅಪ್ ಸಂಸ್ಥೆಯಾದ ಡೊನ್ಜೊ ಆರ್ಥಿಕ ಸಂಕಷ್ಟದಲ್ಲಿದೆ.

ಡೊನ್ಜೊ ಸೆಪ್ಟೆಂಬರ್‌ವರೆಗೆ ಉದ್ಯೋಗಿಗಳಿಗೆ ವೇತನವನ್ನು ನೀಡಲಾಗದು. ವೇತನ ಬಾಕಿ ಇಡಲಾಗುವುದು ಎಂದು ತಿಳಿಸಿರುವು ದಾಗಿ ವರದಿಯಾಗಿದೆ. ಡೊನ್ಜೊ ಶೇಕಡ 50ರಷ್ಟು ಉದ್ಯೋಗಿಗಳಿಗೆ ವೇತನ ಬಾಕಿ ಉಳಿಸಿ ಈ ಹಿಂದೆ ಸುದ್ದಿಯಾಗಿತ್ತು.

ಡೊನ್ಜೊ ಪ್ರಸ್ತುತ ಹಣಕಾಸು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಆದ್ದರಿಂದಾಗಿ ಶೇ.50ರಷ್ಟು ಡಾರ್ಕ್ ಸ್ಟೋರ್‌ಗಳ ಕಡಿತ, ಉದ್ಯೋಗ ಕಡಿತ, ಫಂಡ್‌ ರೈಸ್, ವೇತನ ವಿಳಂಬ ಹಲ ವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬರುತ್ತಿದೆ. ಕಡಿಮೆ ಸಮಯದಲ್ಲಿ ಆರ್ಡರ್‌ ಗಳನ್ನು ತಲುಪಿಸಲು ಅಗತ್ಯ ವಸ್ತುಗಳನ್ನು ಇರಿಸಲಾಗುವ ಸಣ್ಣ ಗೋದಾಮಿಗೆ ಡಾರ್ಕ್ ಸ್ಟೋರ್‌ ಎಂದು ಕರೆಯಲಾಗುತ್ತದೆ.

ಸಂಸ್ಥೆಯು ಜೂನ್‌ ತಿಂಗಳಲ್ಲಿ ಕೆಲವರಿಗೆ ವೇತನ ವಿಳಂಬ ಮಾಡಿದೆ. ಡೊನ್ಜೊ ತಮ್ಮ ಉದ್ಯೋಗಿಗಳ ಪೈಕಿ ಶೇಕಡ 50ರಷ್ಟು ಉದ್ಯೋಗಿಗಳಿಗೆ ವೇತನ ಮುಂದೂಡಿದೆ. ಆದರೆ ಈಗ ಸೆಪ್ಟೆಂಬರ್‌ 4ರವರೆಗೆ ಉದ್ಯೋಗಿಗಳಿಗೆ ವೇತನ ನೀಡಲಾಗದು ಎಂದು ಡೊನ್ಜೊ ಹೇಳಿಕೊಂಡಿದೆ.

ಅತೀ ಹೆಚ್ಚು ಬೇಡಿಕೆ ಹೊಂದಿರುವ ಡೆಲಿವರಿ ಸಂಸ್ಥೆಯು ಸುಮಾರು 1000 ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಸುಮಾರು 500 ಉದ್ಯೋಗಿಗಳಿಗೆ ಡೊನ್ಜೊ ಜೂನ್‌ ತಿಂಗಳ ವೇತನವನ್ನು ಮುಂದಿನ ತಿಂಗಳಿನಲ್ಲಿ ನೀಡುವುದಾಗಿ ಈ ತಿಂಗಳ ಆರಂಭದಲ್ಲಿ ತಿಳಿಸಿದೆ. ಗರಿಷ್ಠವೆಂದರೆ ಉದ್ಯೋಗಿಗಳಿಗೆ 75,000 ರೂಪಾಯಿಯನ್ನು ವೇತನವಾಗಿ ನೀಡಲಾಗುತ್ತದೆ ಎಂದು ವರದಿಯು ಹೇಳುತ್ತದೆ.

ಲಾಜಿಸ್ಟಿಕ್ಸ್‌ ಆಂಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆದ ಡೊನ್ಜೊ ಈಗ ಮತ್ತೆ ಮೂರನೇ ಹಂತದ ಉದ್ಯೋಗ ಕಡಿತ ಮಾಡುವ ಸಾಧ್ಯತೆ ಕಂಡು ಬಂದಿದೆ. ಈ ವರ್ಷದ ಮೊದಲಾರ್ಧದಲ್ಲಿ 400 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಏಪ್ರಿಲ್‌ನಲ್ಲಿ ಮತ್ತೆ ಶೇಕಡ 30ರಷ್ಟು ಉದ್ಯೋಗ ಕಡಿತ ಮಾಡಿದೆ.

Leave a Reply

Your email address will not be published. Required fields are marked *