ಕಣ್ಣುಗಳು ಸಾಕಷ್ಟು ಕಣ್ಣೀರನ್ನು ಉತ್ಪಾದಿಸದಿದ್ದಾಗ ಅಥವಾ ಕಣ್ಣೀರು ಬೇಗನೆ ಆವಿಯಾದಾಗ ಒಣ ಕಣ್ಣುಗಳ ಸಮಸ್ಯೆ ಕಾಡುತ್ತದೆ. ಇದರಿಂದ ಕಣ್ಣು ಕೆಂಪಾಗುವುದು, ನೋವು ಉಂಟಾಗುತ್ತದೆ. ಶೀತ, ಶುಷ್ಕ ಗಾಳಿ ಇರುವಂತಹ ಚಳಿಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಇದು ಕಣ್ಣಿನ ತೇವಾಂಶದ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಿನವರು ಕಣ್ಣುಗಳ ಒಣಗುವಿಕೆಯ ಸಮಸ್ಯೆಯಿಂದ ಬಳಲುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಒಣಕಣ್ಣುಗಳ(Dry Eye) ಸಮಸ್ಯೆ ಹೋಗಲಾಡಿಸಲು ಪರಿಹಾರ ಏನೆಂಬುದನ್ನು ತಿಳಿದುಕೊಳ್ಳಿ.

ಒಳಾಂಗಣದಲ್ಲಿ ತೇವಾಂಶವನ್ನು ಹೆಚ್ಚಿಸಿ
ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಸೂಕ್ತ ತೇವಾಂಶದ ಮಟ್ಟವನ್ನು ಕಾಪಾಡಿಕೊಳ್ಳಲು ಆರ್ದ್ರಕವನ್ನು ಬಳಸಿ. ಇದು ವಾತಾವರಣವನ್ನು ಬಿಸಿಯಾಗಿಡುತ್ತದೆ. ಇದರಿಂದ ಕಣ್ಣುಗಳು ಒಣಗುವ ಸಮಸ್ಯೆ ದೂರವಾಗುತ್ತದೆ. ಬಿಸಿ ಗಾಳಿ ನಿಮ್ಮ ಕಣ್ಣುಗಳನ್ನು ಹೈಡ್ರೇಟ್ ಆಗಿರಿಸುತ್ತದೆ.
ಕೃತಕ ಕಣ್ಣೀರನ್ನು ಬಳಸಿ
ಓವರ್-ದಿ-ಕೌಂಟರ್ ಲ್ಯೂಬ್ರಿಕೇಟಿಂಗ್ ಕಣ್ಣಿನ ಹನಿಗಳು ತಕ್ಷಣದ ಪರಿಹಾರವನ್ನು ನೀಡುತ್ತವೆ. ಹಾಗಾಗಿ ವೈದ್ಯರ ಸಲಹೆಯಂತೆ ಈ ಕಣ್ಣಿನ ಹನಿಗಳನ್ನು ಬಳಸಿ. ಆದರೆ ಇದರಲ್ಲಿ ಸಂರಕ್ಷಕಗಳು ಕಣ್ಣುಗಳಿಗೆ ಕಿರಿಕಿರಿ ಉಂಟುಮಾಡಬಹುದು. ಹಾಗಾಗಿ ಅಂತವರು ಬಳಸುವುದನ್ನು ತಪ್ಪಿಸಿ.
ಹೊರಗಡೆ ಹೋದಾಗ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ
ತಂಪಾದ ಗಾಳಿಯಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸನ್‍ಗ್ಲಾಸ್ ಅಥವಾ ಕನ್ನಡಕಗಳನ್ನು ಧರಿಸಿ. ಇದು ಕಣ್ಣೀರಿನ ಆವಿಯಾಗುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣನ್ನು ಒಣಗಿಸುವ ಅಂಶಗಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಡೆಯುತ್ತದೆ.
ಪರದೆಗಳಿಂದ ವಿರಾಮ ತೆಗೆದುಕೊಳ್ಳಿ
ತುಂಬಾ ಹೊತ್ತು ಮೊಬೈಲ್, ಟಿವಿ, ಲ್ಯಾಪ್‌ಟಾಪ್ ನೋಡುವುದನ್ನು ತಪ್ಪಿಸಿ. ಹಾಗೇ 20-20-20 ನಿಯಮವನ್ನು ಅನುಸರಿಸಿ: ಪ್ರತಿ 20 ನಿಮಿಷಗಳಿಗೊಮ್ಮೆ, 20 ಅಡಿ ದೂರದಲ್ಲಿರುವ ಏನನ್ನಾದರೂ 20 ಸೆಕೆಂಡುಗಳ ಕಾಲ ನೋಡಿ. ಇದು ಕಣ್ಣು ಮಿಟುಕಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ನಿಮ್ಮ ಕಣ್ಣುಗಳನ್ನು ನಯಗೊಳಿಸುತ್ತದೆ.

ಹೈಡ್ರೇಟ್ ಆಗಿರಿ
ಒಟ್ಟಾರೆ ಜಲಸಂಚಯನವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯಿರಿ, ಇದು ಕಣ್ಣೀರಿನ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಆರೋಗ್ಯಕರ ಕಣ್ಣೀರನ್ನು ಉತ್ತೇಜಿಸಲು ಸಾಲ್ಮನ್, ಅಗಸೆ ಬೀಜಗಳು ಮತ್ತು ವಾಲ್ನ್‍ಟ್‍ಗಳಂತಹ ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ.
ನೇರವಾಗಿ ಕಣ್ಣನ್ನು ಶಾಖಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ
ರೇಡಿಯೇಟರ್‌ಗಳು ಅಥವಾ ಒಲೆಗಳಂತಹ ನೇರ ಶಾಖಗಳಿಗೆ ಕಣ್ಣನ್ನು ಒಡ್ಡಿಕೊಳ್ಳುವುದನ್ನು ತಪ್ಪಿಸಿರಿ. ಇದರ ಶಾಖಕ್ಕೆ ಕಣ್ಣುಗಳು ಬೇಗ ಒಣಗಿ ಕೆಂಪಾಗುತ್ತವೆ.
ಕಣ್ಣಿನ ತಜ್ಞರನ್ನು ಸಂಪರ್ಕಿಸಿ
ಈ ಸಮಸ್ಯೆಗಳು ಹೆಚ್ಚು ಕಾಡಿದರೆ ನೇತ್ರತಜ್ಞರನ್ನು ಸಂಪರ್ಕಿಸಿ. ಅವರು ಕಣ್ಣುಗಳನ್ನು ಪರೀಕ್ಷಿಸುವುದರ ಮೂಲಕ ಸರಿಯಾದ ಚಿಕಿತ್ಸೆಯನ್ನು ಹಾಗೂ ಔಷಧಿಗಳನ್ನು ನೀಡುತ್ತಾರೆ. ಅವುಗಳನ್ನು ನಿಯಮಿತವಾಗಿ ವೈದ್ಯರ ಸಲಹೆಯಂತೆ ಬಳಸಿ.
ಇದನ್ನೂ ಓದಿ:ಮಧುಮೇಹ ಸಮಸ್ಯೆ ಇರುವವರು ತಪ್ಪದೇ ಈ ಆಹಾರ ಸೇವಿಸಿ
ಈ ರೀತಿಯಲ್ಲಿ ಚಳಿಗಾಲದಲ್ಲಿ ಕಣ್ಣುಗಳನ್ನು ಆರೋಗ್ಯವಾಗಿಟ್ಟುಕೊಳ್ಳಿ. ಒಣ ಕಣ್ಣುಗಳ ಸಮಸ್ಯೆಯನ್ನು ಹೋಗಲಾಡಿಸಿ.