Thursday, 15th May 2025

ಬಾಂಬ್ ಸ್ಫೋಟ ಪ್ರಕರಣ: ಡಿಆರ್ ಡಿಒ ವಿಜ್ಞಾನಿ ಬಂಧನ

DRDO scientist

ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್ ನಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ, ಡಿಆರ್ ಡಿಒ ವಿಜ್ಞಾನಿಯನ್ನು ಬಂಧಿಸಲಾಗಿದೆ.

ಕೋರ್ಟ್ ಗೆ ವಿಚಾರಣೆಗೆ ಹಾಜರಾಗಬೇಕಿದ್ದ ವಕೀಲರನ್ನು ಹತ್ಯೆಗೈಯ್ಯಲು ಟಿಫಿನ್ ಬಾಕ್ಸ್ ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿತ್ತು. ಡಿ.9ರಂದು ನಡೆದಿದ್ದ ಈ ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಇದೀಗ ಆರೋಪಿ ಡಿಆರ್ ಡಿಒ ವಿಜ್ಞಾನಿಯನ್ನು ಬಂಧಿಸಲಾಗಿದೆ.

ಬಂಧಿತ ವಿಜ್ಞಾನಿ ವಕೀಲರನ್ನು ಕೊಲ್ಲಲೆಂದು ಬಾಂಬ್ ಇಟ್ಟಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿ ದ್ದಾನೆ. ಸ್ಫೋಟಕ್ಕೆ ಅಗತ್ಯವಿದ್ದ ವಸ್ತುಗಳನ್ನು ಆನ್ ಲೈನ್ ಮೂಲಕ ತರಿಸಿಕೊಂಡಿದ್ದಾಗಿಯೂ ತಿಳಿಸಿ ದ್ದಾನೆ ಎಂದು ತಿಳಿದುಬಂದಿದೆ.