Wednesday, 14th May 2025

“ಡ್ರ್ಯಾಗನ್ ಫ್ರೂಟ್‌” ಇನ್ನು ’ಕಮಲಂ’

ಅಹಮದಾಬಾದ್: ದೇಶದಲ್ಲಿ ಕೆಲವು ವರ್ಷಗಳಿಂದೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ “ಡ್ರ್ಯಾಗನ್ ಫ್ರೂಟ್‌”ಗೆ ಗುಜರಾತ್ ಸರ್ಕಾರ ಮರು ನಾಮಕರಣ ಮಾಡಿದೆ.

ಗುಜರಾತ್ ನಲ್ಲಿ ಸಿಎಂ ತೋಟಗಾರಿಕಾ ಅಭಿವೃದ್ಧಿ ಕಾರ್ಯಸೂಚಿ ಬಿಡುಗಡೆ ಮಾಡಿದ ಗುಜರಾತ್ ಸಿಎಂ ವಿಜಯನ್ ರೂಪಾಣಿ ಡ್ರ್ಯಾಗನ್ ಫ್ರೂಟ್‌ಗೆ ಹೊಸ ಹೆಸರಿಟ್ಟಿರುವುದಾಗಿ ತಿಳಿಸಿದರು. ಡ್ರ್ಯಾಗನ್ ಫ್ರೂಟ್ ಮೇಲ್ಭಾಗ ಕಮಲವನ್ನು ಹೋಲುತ್ತದೆ. ಹೀಗಾಗಿ ಈ ಹಣ್ಣಿಗೆ “ಕಮಲಂ” ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

“ಡ್ರ್ಯಾಗನ್ ಫ್ರೂಟ್ ಹೆಸರು ಚೀನಾಗೆ ಸಂಬಂಧಿಸಿದಂತೆ ಇದೆ. ಹೀಗಾಗಿ ಹಣ್ಣಿನ ಹೆಸರನ್ನು ಬದಲಾಯಿಸಿದೆವು. ಹೆಸರು ಬದಲಾ ವಣೆಗೆ ಪೇಟೆಂಟ್ ಪಡೆಯಲು ಅರ್ಜಿ ಕೂಡ ಸಲ್ಲಿಸಲಾಗಿದೆ. ಇನ್ನು ಮುಂದೆ ಗುಜರಾತ್ ನಲ್ಲಿ ಇದಕ್ಕೆ “ಕಮಲಂ” ಎಂದೇ ಕರೆಯುತ್ತೇವೆ ಎಂದಿದ್ದಾರೆ.

ಕಮಲಂ ಎಂದರೆ ಸಂಸ್ಕೃತದಲ್ಲಿ ಕಮಲ ಎಂದು. ಈಚಿನ ವರ್ಷಗಳಲ್ಲಿ ಡ್ರ್ಯಾಗನ್ ಫ್ರೂಟ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿದೆ. ತನ್ನ ಭಿನ್ನ ನೋಟ ಹಾಗೂ ರುಚಿಯಿಂದ ಈ ಹಣ್ಣು ಗಮನ ಸೆಳೆದಿದೆ. ಹೀಗಾಗಿ ಹಣ್ಣಿನ ಹೆಸರನ್ನು ಬದಲಿಸಲು ತೀರ್ಮಾನಿಸಲಾಗಿದೆ.

ಆದರೆ ಬಿಜೆಪಿ ಪಕ್ಷದ ಸಂಕೇತವೂ ಕಮಲವಾದ್ದರಿಂದ ಹಾಗೂ ಗಾಂಧಿನಗರದ ಬಿಜೆಪಿ ಮುಖ್ಯ ಕಚೇರಿಗೂ ಶ್ರೀಕಮಲಂ ಎಂದು ಹೆಸರಿಟ್ಟಿರುವುದರಿಂದ ಈ ಹಣ್ಣಿಗೆ ಈ ಹೆಸರು ಇಟ್ಟಿರುವುದು ಗಮನ ಸೆಳೆದಿದೆ.

Leave a Reply

Your email address will not be published. Required fields are marked *