Wednesday, 14th May 2025

ಕೋರ್ಟ್ ಸಂಕೀರ್ಣದಲ್ಲಿನ ಬ್ಯಾಂಕ್ ಶಾಖೆಯಲ್ಲಿ ಬೆಂಕಿ: ಕಡತಗಳ ನಾಶ

ನವದೆಹಲಿ: ಸುಪ್ರೀಂ ಕೋರ್ಟ್ ಸಂಕೀರ್ಣದಲ್ಲಿನ ಬ್ಯಾಂಕ್ ಶಾಖೆಯಲ್ಲಿ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗಾರ್ಗ್, ಕೋರ್ಟ್ ಆವರಣದಲ್ಲಿ ರುವ ಯುಸಿಒ ಬ್ಯಾಂಕ್ ಶಾಖೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಬೆಳಿಗ್ಗೆ 9:10 ಕ್ಕೆ ಮಾಹಿತಿ ಲಭಿಸಿದೆ. ಐದು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು ಮತ್ತು ಬೆಳಿಗ್ಗೆ 10 ಗಂಟೆಗೆ ಬೆಂಕಿ ನಂದಿಸಲಾಯಿತು ಎಂದು ಹೇಳಿದರು.

ಹವಾನಿಯಂತ್ರಣ ಘಟಕಗಳು (ಎಸಿ ಘಟಕಗಳು) ಮತ್ತು ಕಡತಗಳು ಘಟನೆಯಲ್ಲಿ ಆಹುತಿಯಾಗಿವೆ.